ಪಾಣಾಜೆ: ಸುಬೋಧ ಪ್ರೌಢ ಶಾಲೆಯಲ್ಲಿ ಹೊಸದಾಗಿ ನಿರ್ಮಿತ ಕಂಪ್ಯೂಟರ್ ಲ್ಯಾಬ್ ಉದ್ಘಾಟನಾ ಕಾರ್ಯಕ್ರಮ ಭಾನುವಾರ ಯಶಸ್ವಿಯಾಗಿ ನೆರವೇರಿತು.
ಈ ಸಂದರ್ಭದಲ್ಲಿ ಲ್ಯಾಬ್ ಕೊಠಡಿಯ ನಿರ್ಮಾಣ ಹಾಗೂ ಒಳಸೌಕರ್ಯಗಳ ಸಜ್ಜುಕ್ರಮದಲ್ಲಿ ಶ್ರಮಿಸಿ ಸಹಕರಿಸಿದ ಪುತ್ತಿಲಪರಿವಾರ ಸೇವಾ ಟ್ರಸ್ಟ್ (ರಿ) ಪಾಣಾಜೆ ಸಂಸ್ಥೆಯ ಕಾರ್ಯಕರ್ತರನ್ನು ಶಾಲೆಯು ಪ್ರೀತಿ ಪೂರ್ವಕ ಗೌರವಿಸಿ ಕೃತಜ್ಞತೆ ಸಲ್ಲಿಸಿತು.
ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಮಂಡಳಿ, ಶಿಕ್ಷಕ ವರ್ಗ, ವಿದ್ಯಾರ್ಥಿಗಳು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.