ವಿಟ್ಲ : ವಿಟ್ಲ ಪೊಲೀಸ್ ಠಾಣೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಗ್ರಹರಕ್ಷಕದಳ ಸಿಬ್ಬಂದಿಗಳಿಗೆ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ವಿಟ್ಲ ಇದರ ವತಿಯಿಂದ ರೈನ್ ಕೋಟ್ ವಿತರಣಾ ಸಮಾರಂಭವು ವಿಟ್ಲ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯಿತು.
ಸಾರ್ವಜನಿಕ ದುರ್ಗಾ ಪೂಜಾ ಸಮಿತಿ ಅಧ್ಯಕ್ಷರಾದ ನ್ಯಾಯವಾದಿ ಶ್ರೀಕೃಷ್ಣ ಅವರ ಅದ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಮಳೆಗಾಲಕ್ಕೆ ಅತೀ ಅವಶ್ಯಕವಾಗಿರುವ ರೈನ್ ಕೋಟ್ ಅನ್ನು ವಿತರಿಸಿದ ವೇಳೆಯಲ್ಲಿ ಬಿಜೆಪಿ ಮುಖಂಡರಾದ ಅರುಣ್ ಪುತ್ತಿಲ ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸುತ್ತಿರುವ ಗ್ರಹ ರಕ್ಷಕ ದಳ ಸಿಬ್ಬಂದಿಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಮುಂದೆಯೂ ಅಗತ್ಯವಿದ್ದರೆ ನಮ್ಮ ಟ್ರಸ್ಟ್ ನಿಮಗೆ ಯಾವತ್ತೂ ಸಹಕಾರ ನೀಡುತ್ತದೆ ಎಂದು ಹೇಳಿದರು .
ಸಾರ್ವಜನಿಕರಿಗೆ ನಿಮ್ಮ ಮೇಲೆ ಅಪಾರ ಗೌರವವಿದ್ದು ಅವರ ಅಭಿಮಾನಕ್ಕೆ ದಕ್ಕೆಯಾಗದಂತೆ ಕರ್ತವ್ಯ ನಿರ್ವಹಿಸಬೇಕು ಎಂಬುದು ನಮ್ಮೆಲ್ಲರ ಆಶya ಎಂಬುದಾಗಿ ಕೂಡ ತಿಳಿಸಿದರು .
ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ವಿಟ್ಲದಲ್ಲಿ ಸಾಮಾಜಿಕ, ಧಾರ್ಮಿಕ ಕೆಲಸ ಕಾರ್ಯದಲ್ಲಿ ಮುಂಚೂಣಿಯಲ್ಲಿದ್ದು ಜನರ ಅಭಿಮಾನಕ್ಕೆ ಪಾತ್ರ ವಾಗಿದೆ.
ಮುಂದಿನ ದಿನಗಳಲ್ಲೂ ವಿಟ್ಲ ಭಾಗದಲ್ಲಿ ಸಮಾಜಮುಖಿ ಕೆಲಸ ಮಾಡಲು ವಿಟ್ಲ ಪಂಚಲಿಂಗೇಶ್ವರ ದೇವರು ಶಕ್ತಿ ನೀಡಲಿ ಎಂದು ಪ್ರಾರ್ಥಿಸಿಕೊಂಡರು.
ವೇದಿಕೆಯಲ್ಲಿ ಪ್ರಮುಖರಾದ ಪಟ್ಟಣ ಪಂಚಾಯತ್ ಸದಸ್ಯರಾದ ಅಶೋಕ್ ಶೆಟ್ಟಿ, ರಘುನಾಥ್ ರೈ, ಹರೀಶ್ ಮರುವಾಳ, ಉಮೇಶ್ ಕೊಡಿಬೈಲು, ಶ್ರೀಕೃಷ್ಣ ವಿಟ್ಲ ಕೃಷ್ಣಯ್ಯ ಬಲ್ಲಾಳ್ ಸೇರಿದಂತೆ ಟ್ರಸ್ಟ್ ಮತ್ತು ಪೂಜಾ ಸಮಿತಿ ಪದಾಧಿಕಾರಿಗಳು ಮತ್ತು ಗ್ರಹರಕ್ಷಕ ಸಿಬ್ಬಂದಿಗಳು ಹಾಗೂ ಇನ್ನಿತರರು ಉಪಸ್ಥಿತರಿದ್ದರು.