ಪಕ್ಷದ ಕಾರ್ಯಾಲಯ ಎಂದರೆ ಕಾರ್ಯಕರ್ತರ ದೇವಾಲಯ: ರವೀಶ್ ತಂತ್ರಿ ಕುಂಟರ್

  • 14 Jul 2025 03:23:58 PM


ಸುಂಕದಕಟ್ಟೆ: ಕಾರ್ಯಕರ್ತರ ಶ್ರಮಕ್ಕೆ ಬೆಲೆ ಸಿಕ್ಕೇ ಸಿಗುತ್ತದೆ. ಎಲ್ಲಾ ಕಾರ್ಯಕರ್ತರು ನಾಯಕರಾಗಿ ಬೆಳೆಯಬೇಕು ನಾಯಕರಾಗಿ ಬೆಳೆದು ಬರುತ್ತಾರೆ. ಹಾಗೆಯೇ ಪಕ್ಷದ ಕಾರ್ಯಾಲಯವು ಕಾರ್ಯಕರ್ತರಿಗೆ ದೇವಾಲಯದಂತೆಯೇ ಪವಿತ್ರವಾದ ಸ್ಥಳವಾಗಬೇಕು," ಎಂದು ವರ್ಕಾಡಿ ಪಂಚಾಯತ್‌ನಲ್ಲಿ ನೂತನ ಬಿಜೆಪಿ ಕಾರ್ಯಾಲಯದ ಉದ್ಘಾಟನಾ ಸಮಾರಂಭದಲ್ಲಿ ಶ್ರೀ ರವೀಶ್ ತಂತ್ರಿ ಕುಂಟರ್ ಅವರು ಹೇಳಿದರು.

 

ಕಾರ್ಯಕ್ರಮದ ಆರಂಭದಲ್ಲಿ ಬಿಜೆಪಿ ಜಿಲ್ಲಾ ಅಧ್ಯಕ್ಷೆ ಅಶ್ವಿನಿ ಎಂ ಎಲ್ ಅವರು ಧ್ವಜಾರೋಹಣ ನೆರವೇರಿಸಿದರು. ಭಾಸ್ಕರ್ ಪೊಯ್ಯೇ ಅವರು ಅಧ್ಯಕ್ಷತೆ ವಹಿಸಿದ್ದರು.

 

ಬಿಜೆಪಿ ಮಂಡಲಾಧ್ಯಕ್ಷ ಆದರ್ಶ ಬಿ.ಎಂ, ಜಿಲ್ಲಾ ಉಪಾಧ್ಯಕ್ಷ ಮಣಿಕಂಠ ರೈ ಮುಖಂಡರಾದ ವಿಜಯ್ ಕುಮಾರ್ ರೈ, ಸುಧಾಮ ಗೊಸಡ, ದೂಮಪ್ಪ ಶೆಟ್ಟಿ, ಹರಿಶ್ಚಂದ್ರ ಮಂಜೇಶ್ವರ, ಸತಿಶ್ಚಂದ್ರ ಭಂಡಾರಿ, ಕೆ.ವಿ. ಭಟ್, ಯತೀರಾಜ್ ಶೆಟ್ಟಿ, ತುಳಸಿ ಕುಮಾರಿ ಆನಂದ ತಚ್ಚಿರೆ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದು ತಮ್ಮ ಅಮೂಲ್ಯ ಅಭಿಪ್ರಾಯಗಳನ್ನು ಹಂಚಿಕೊಂಡರು.

 

ಗೋಪಾಲ್ ಶೆಟ್ಟಿ, ನಾಗಪ್ಪ, ಜೀವನ್, ವಿವೇಕಾನಂದ, ಜಗದೀಶ್ ಚೆಂಡ್ಲಾ ಸೇರಿದಂತೆ ಹಲವಾರು ಪ್ರಮುಖರು ಕಾರ್ಯಕ್ರಮದ ನೇತೃತ್ವ ವಹಿಸಿದರು.

 

ಗೋಪಿನಾಥ್ ವಂದೇ ಮಾತರಂ ಗೀತೆಯನ್ನು ಹಾಡಿ ಕಾರ್ಯಕ್ರಮವನ್ನು ಉಜ್ವಲ ಆರಂಭ ನೀಡಿದರು. ರಕ್ಷನ್ ಅಡಕಲಾ ಸ್ವಾಗತಿಸಿ, ನಾಗೇಶ್ ಬಳ್ಳೂರ್ ವಂದಿಸಿದರು.

 

ಕಾರ್ಯಕ್ರಮದಲ್ಲಿ ಹಲವು ಜನಪ್ರತಿನಿಧಿಗಳು, ಹಿರಿಯ ನೇತಾರರು ಕಾರ್ಯಕರ್ತರು ಹಾಜರಿದ್ದರು.