ಜೋ ಸ್ಮರಣಾರ್ಥ : ತಲಪಾಡಿಯಲ್ಲಿ *ಜೋ ಟ್ರೋಫಿ 2024* ಕ್ರಿಕೆಟ್ ಪಂದ್ಯಾಟ

  • 13 Nov 2024 08:44:02 PM

ತಲಪಾಡಿ: ಸ್ವರ್ಗೀಯ ಜ್ಯೋತಿಷ್ ಕುಮಾರ್ ಕಾಸರಗೋಡು ಅವರ ಸ್ಮರಣಾರ್ಥ ತಲಪಾಡಿಯಲ್ಲಿ *ಜೋ ಟ್ರೋಫಿ ತಲಪಾಡಿ 2024* ಎಂಬ ಹೆಸರಿನಲ್ಲಿ ಕ್ರಿಕೆಟ್ ಪಂದ್ಯಾಟವನ್ನು ಆಯೋಜಿಸಲಾಗಿತ್ತು.ಇದರ ಉದ್ಘಾಟನೆಯನ್ನು ಗಣೇಶ್ ಕೆದಿಲ ಅವರು ನಿರ್ವಹಿಸಿದರು. 50ಕ್ಕೂ ಹೆಚ್ಚು ತಂಡಗಳು ಈ ಪಂದ್ಯಾಟದಲ್ಲಿ ಭಾಗವಹಿಸಿದ್ದವು. PSV ಕುತ್ತಾರ್ ತಂಡವು ಪ್ರಥಮ ಸ್ಥಾನವನ್ನು ಪಡೆದುಕೊಂಡಿತು. ಬ್ರಹ್ಮ ಶ್ರೀ ಬೀಜಂದಾರ್ ತಂಡವು ದ್ವಿತೀಯ 
ಸ್ಥಾನವನ್ನು ತಮ್ಮದಾಗಿಸಿಕೊಂಡಿತು.

 

ಈ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ದಿನೇಶ್ ತಲಪಾಡಿ, ಹಿಂದೂ ಸಂಘಟನೆಯ ಪ್ರಮುಖ ಅಕ್ಷಯ್ ರಜಪುತ್ ಕಲ್ಲಡ್ಕ, ನರಸಿಂಹ ಮಣಿ ಮತ್ತು ದಿವಾಕರ್ ರರವರು ಭಾಗವಹಿಸಿದ್ದರು.

 

ಜ್ಯೋತಿಷ್ ಕುಮಾರ್ ಅವರನ್ನು ಕಾಸರಗೋಡು ನಾಡು *ಮಕ್ಕಳ ನೆಚ್ಚಿನ ಜ್ಯೋತಿ ಅಣ್ಣ* ಎಂಬ ಹೆಸರಿನಿಂದ ಗುರುತಿಸುತ್ತಿತ್ತು. ಹಿಂದೂ ಪರ ಸಂಘಟನೆಗಳಲ್ಲಿ ಕೇಂದ್ರಬಿಂದು ಆಗಿದ್ದ ಅವರು ಹೆಣ್ಣು ಮಕ್ಕಳ ಕಾವಲುಗಾರ ಎಂಬ ಹಿರಿಮೆಯನ್ನು ಹೊಂದಿದ್ದರು. ಇದರಿಂದಲೇ ಅವರ ಹೆಸರು ಕಿಡಿಗೇಡಿಗಳ ನಿದ್ದೆ ಕೆಡಿಸುವಂತೆ ಮಾಡುತಿತ್ತು.ಅವರ ಅಗಲಿಕೆಯ ದುಃಖ ಇನ್ನೂ ಈ ನಾಡಿನ ಜನರ ಹೃದಯಗಳನ್ನು ಕಾಡುತ್ತಿದೆ.

 

ಈ ಕ್ರಿಕೆಟ್ ಪಂದ್ಯಾಟದ ಮೂಲಕ, ಜ್ಯೋತಿಷ್ ಕುಮಾರ್ ಅವರ ನೈತಿಕತೆ ಮತ್ತು ತ್ಯಾಗಗಳನ್ನು ಮತ್ತೆ ನೆನಪಿಸಲು ಸಮುದಾಯವು ಒಟ್ಟಾಗಿ ಸೇರಿ, ಈ ಪಂದ್ಯಾಟಕ್ಕೆ ಅವರ ಸ್ಮರಣಾರ್ಥವಾಗಿ *ಜೋ ಟ್ರೋಫಿ* ಎಂದು ಹೆಸರಿಟ್ಟರು. ಇದು ಕ್ರೀಡೆಯ ಮೇಲಿನ ಪ್ರೀತಿ ಮತ್ತು ಸಂಘಟನೆಯ ಮಹತ್ವವನ್ನು ತೋರಿಸುತ್ತಿತ್ತು.