ಮಠ ಮಂದಿರಗಳ ಪ್ರಾಮುಖ್ಯತೆ: ಮಂಗಲ್ಪಾಡಿ ಏಕಾಹ ಭಜನಾ ಮಂದಿರದ ವಜ್ರಮಹೋತ್ಸವದಲ್ಲಿ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿಯವರ ಆಶೀರ್ವಚನ

  • 14 Nov 2024 03:16:06 PM

ಮಂಗಲ್ಪಾಡಿ: ನವಂಬರ 11 ಇತಿಹಾಸ ಪ್ರಸಿಧ್ಧವಾದ ಮಂಗಲ್ಪಾಡಿ ಏಕಾಹ ಭಜನಾ ಮಂದಿರದ ವಜ್ರಮಹೋತ್ಸವದ ಸಂದರ್ಭದಲ್ಲಿ ಕೊಂಡೆವೂರಿನ ಶ್ರೀಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿಯವರು ಧಾರ್ಮಿಕ ಸಭೆಯಲ್ಲಿ - *ಇಂದಿನ ಕಾಲಘಟ್ಟದಲ್ಲಿ ಹಿಂದೂಗಳ ಜಾಗೃತಿ ಹಾಗೂ ಒಗ್ಗಟ್ಟನ್ನು ಉದ್ದೀಪನಗೊಳಿಸಲು ಧಾರ್ಮಿಕ ಶಿಕ್ಷಣದ ಅವಶ್ಯಕತೆ ಇದೆ*. ಇಲ್ಲಿ ಇಂತಹಾ ಕಾರ್ಯಕ್ರಮಗಳು ಹೆಚ್ಚಲಿ ಎಂದು ಆಶೀರ್ವಚನ ನೀಡಿದರು.


  
ಈ ವಜ್ರಮಹೋತ್ರವದ ಆಚರಣೆಯ ಸಲುವಾಗಿ 4.11.24 ರಂದು ಪದ್ಯಾಣ ಶ್ರೀರಘು ರಾಮ ಕಾರಂತರ (ನೇಪಾಳದ ವಶುವತಿ ನಿವೃತ್ತಅರ್ಚಕರು) ಇವರಿಂದ ಉದ್ಘಾಟಿಸಲ್ಪಟ್ಟ ಭಜನಾ ಕಾರ್ಯಕ್ರಮವು ಸಂಜೆ 6.30 ರಿಂದ 8.30ರ ವರೆಗೆ ಏಳುದಿನ ನಿರಂತರವಾಗಿ ನಡೆಯಿತು.

 

ತಾ,11.11, 24 ರಂದು ಶಾಲಾ ಮಕ್ಕಳಿಗಾಗಿ ಕಲಾಕುಂಚ ಕೇರಳ ಗಡಿನಾಡ ಘಟಕ ಮತ್ತು ಮಂದಿರದ ಸಹಯೋಗಲ್ಲಿ ಗೀತಾ ಕಂಠಪಾಠ ಸ್ಪರ್ಧೆ ನಡೆಯಿತು. ರಾತ್ರಿ 6-00 ರಿಂದ ಸತ್ಯನಾರಾಯಣ ಪೂಜೆ ನೆರವೇರಿತು.ನಂತರ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಸುರೇಶ ಶೆಟ್ಟಿ ಪರಕಿಲ ಅಧ್ಯಕ್ಷತೆ ವಹಿಸಿದ್ದರು. ಪರಮಪೂಜ್ಯ ಶ್ರೀ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಕೊಂಡೆವೂರು ಆಶೀರ್ವಚನ ನೀಡಿದರು. ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು ಅವರು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿದ್ದರು. ಕಾರ್ಯಕ್ರಮದಲ್ಲಿ ಹಿರಿಯರಾದ ಲಿಂಗಪ್ಪ ಶೆಟ್ಟಿಗಾರ್ ಅವರ  *ಏಳು ಬೀಳಿನ ಬಾಳು* ಎಂಬ ಕೃತಿಯ ಬಿಡುಗಡೆ ನಡೆಯಿತು. ಹಾಗೂ ಲಿಂಗಪ್ಪ ಶೆಟ್ಟಿಗಾರ ದಂಪತಿಗಳನ್ನು ಸನ್ಮಾನಿಸಲಾಯಿತು.  ಡಾ. ಶ್ರೀಧರ ಭಟ್,ಪ್ರವೀಣ್ ಆರಿಕ್ಕಾಡಿ, ಶ್ರೀ ಕೃಷ್ಣ ಶಿವಕೃಪ, ಮೋಹನ್ ಶೆಟ್ಟಿ ತುಮಿನಾಡು, ಗಣೇಶ್ ರೈ ಕೋಡಿಬೈಲು, ಶ್ರೀಮತಿ ಮೀರಾ ಆಳ್ವ, ರವಿ ನಾರಾಯಣ ಗುಣಾಜೆ  ಮುಂತಾದವರು 
ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

 

ಶ್ರೀವಿಜಯ ಕುಮಾರ್ ರೈಯವರು ಸ್ವಾಗತವನ್ನೂ ಕೋರಿದರು. ವೇದಾಂತ ಕಾರಂತ ಮತ್ತು ಪ್ರಣವ ಕೃಷ್ಣರವರು ಪ್ರಾರ್ಥನೆಯನ್ನು  ಹಾಡಿದರು. ಶ್ರೀಧರ ಶೆಟ್ಟಿಯವರು ಧನ್ಯವಾದ ಭಾಷಣವನ್ನು  ಅರ್ಪಿಸಿದರು. ಕೊನೆಯಲ್ಲಿ  ಸಾಂಸ್ಕೃತಿಕ ಕಾಯ೯ಕ್ರಮ ದ ಅಂಗವಾಗಿ ಸಮೂಹ ನೃತ್ಯ ಸ್ಪರ್ಧೆ ನಡೆಯಿತು.


 
ತಾ.12 ರ  ಬೆಳಗ್ಗೆ 6.30 ಯಿಂದ ಮರುದಿನ ಬೆಳಿಗ್ಗೆಯ ವರೆಗೆ ನಿರಂತರ ಭಜನಾ ಕಾರ್ಯಕ್ರಮ ಸುಗಮವಾಗಿ ನಡೆಯಿತು.