ಕಾರ್ತಿಕ (ತ್ರಿಪುರಾರಿ) ಹುಣ್ಣಿಮೆಯ ಒಂದು ದೀಪ ಹಿಂದೂ ರಾಷ್ಟ್ರಕ್ಕಾಗಿ

  • 17 Nov 2024 01:39:37 AM

ದಿನಾಂಕ : 15.11.2024

ಹಿಂದೂ ಜನಜಾಗೃತಿ ಸಮಿತಿಯ ವಿಶಿಷ್ಟ ಉಪಕ್ರಮ ,ಕಾರ್ತಿಕ (ತ್ರಿಪುರಾರಿ) ಹುಣ್ಣಿಮೆಯ ಒಂದು ದೀಪ ಹಿಂದೂ ರಾಷ್ಟ್ರಕ್ಕಾಗಿ

 

ಮಂಗಳೂರು : ಕಾರ್ತಿಕ ಹುಣ್ಣಿಮೆಯ ಶುಭಗಳಿಗೆಲ್ಲಿ ದೇವಸ್ಥಾನ ಮತ್ತು ಮನೆಗಳಲ್ಲಿ ದೀಪವನ್ನು ಬೆಳಗಿಸಿ ಹಿಂದೂಗಳು ಈ ವರ್ಷವೂ ದೀಪೋತ್ಸವವನ್ನು ಆಚರಿಸಿದರು. ದೇಶಾದ್ಯಂತ ದೇವಾಲಯಗಳಲ್ಲಿ ಸಾಲುದೀಪಗಳನ್ನು ಬೆಳಗಿಸಲಾಯಿತು. ಈ ವರ್ಷದ ದೀಪೋತ್ಸವದ ವಿಶೇಷತೆ ಏನಂದರೆ ಹಿಂದೂ ರಾಷ್ಟ್ರದ ಸಂಕಲ್ಪದ ಉದ್ದೇಶದಿಂದ *ಒಂದು ದೀಪ ಹಿಂದೂ ರಾಷ್ಟ್ರಕ್ಕಾಗಿ* ಈ ಉಪಕ್ರಮದ ಮೂಲಕ ಹಿಂದೂ ಜನಜಾಗೃತಿ ಸಮಿತಿಯಿಂದ ದೇಶಾದ್ಯಂತ ಜನಜಾಗೃತಿಯನ್ನು ಮೂಡಿಸಲಾಯಿತು. ಮಂಗಳೂರಿನ ಹಳೆ ಕೋಟೆ ಮಾರಿಯಮ್ಮ ದೇವಸ್ಥಾನ, ಬಿಜೈ, ಬಂಟ್ವಾಳ, ಸಜಿಪದ ಮುಂತಾದ ಸ್ಥಳದಲ್ಲಿ ಈ ಅಭಿಯಾನ ನಡೆಯಿತು. ಈ ವೇಳೆ ಮಾರಿಯಮ್ಮ ದೇವಸ್ಥಾನ ವ್ಯವಸ್ಥಾಪಕ ಸಮಿತಿ, ಭಜನಾ ಮಂಡಳಿ ಸದಸ್ಯರು ಮುಂತಾದ ಸಂಘಟನೆಯ ಪ್ರತಿನಿಧಿಗಳ ಜೊತೆಗೆ ಧರ್ಮಪ್ರಿಯರು ಉಪಸ್ಥಿತರಿದ್ದರು 

 

ಕಾರ್ತಿಕ ಹುಣ್ಣಿಮೆಯ ದಿನದಂದು ಶ್ರೀ ಶಂಕರನಿಂದಾ ತ್ರಿಪುರಾಸುನ ನಾಶವಾಯಿತು , ಆದ್ದರಿಂದ ಇದಕ್ಕೆ ತ್ರಿಪುರಾರಿ ಹುಣ್ಣಿಮೆ ಎಂದೂ ಕರೆಯುತ್ತಾರೆ. *ಅಸುರ ಶಕ್ತಿಯ ಮುಂದೆ ಒಳ್ಳೆಯ ಶಕ್ತಿಯ ವಿಜಯದ ಪ್ರತೀಕವಾಗಿ ಭಾರತದ ಹಲವು ದೇವಸ್ಥಾನಗಳಲ್ಲಿ ಈ ತ್ರಿಪುರಾರಿ ಹುಣ್ಣಿಮೆಯನ್ನು ಆಚರಿಸುತ್ತಾರೆ.* ನಮ್ಮ ಸಮಾಜದಲ್ಲಿ ವ್ಯಾಪಕವಾಗಿ ಹರಡುತ್ತಿರುವ ದುಷ್ಟತನದ ಮಾರಿಯ ನಾಶದೊಂದಿಗೆ ಸಮಾಜ ಕಲ್ಯಾಣಕಾರಿ ಹಿಂದೂ ರಾಷ್ಟ್ರದ ಸ್ಥಾಪನೆ ಆಗಲಿ ಎಂಬ ಹಿತೋದ್ದೇಶದಿಂದ ಒಂದು ದೀಪ ಹಿಂದೂ ರಾಷ್ಟ್ರಕ್ಕಾಗಿ ಎಂದು ಬೆಳಗಳಾಯಿತು. ಈ ಉಪಕ್ರಮ ಮಾಧ್ಯಮದಿಂದ ಸಮಾಜದಲ್ಲಿ ಜನಜಾಗೃತಿ ಮಾಡಿಸಲಾಯಿತು. ಈ ಉಪಕ್ರಮದಲ್ಲಿ ಭಾಗವಹಿಸಿರುವ ಧರ್ಮಪ್ರೇಮಿಗಳು ದೇವಸ್ಥಾನದಲ್ಲಿ, ಮನೆಗಳಲ್ಲಿ ಮುಂತಾದ ಸ್ಥಳಗಳಲ್ಲಿ ಪ್ರಭೋದನೆ ಮಾಡಿದರು. ಕೆಲವು ಸ್ಥಳಗಳಲ್ಲಿ ಸಾಮೂಹಿಕ ದೀಪ ಪೂಜೆಯಲ್ಲಿ ಹಿಂದೂ ರಾಷ್ಟ್ರದ ಪ್ರತಿಜ್ಞೆಯನ್ನು ಕೂಡ ಮಾಡಲಾಯಿತು. ಸೋಶಿಯಲ್ ಮೀಡಿಯಾಗಳಲ್ಲಿ ಕೂಡ ಈ ಅಭಿಯಾನವು ಚರ್ಚಾ ವಿಷಯವಾಗಿ ಕಂಡುಬಂದಿದೆ.

 

ತಮ್ಮ ಸವಿನಯ,ಹಿಂದೂ ಜನಜಾಗೃತಿ ಸಮಿತಿ

ಸಂಪರ್ಕ ಕ್ರ : 7204082652