ಆಂಜನೇಯಸ್ವಾಮಿ ದೇವಸ್ಥಾನದ ಪುನರ್‌ ನಿರ್ಮಾಣದ ಹನುಮ ಮಾಲೆ ಪ್ರಚಾರಕ್ಕೆ ಚಾಲನೆ

  • 18 Nov 2024 04:27:47 PM

ನವೆಂಬರ್ 17, 2024 ಆದಿತ್ಯವಾರ ಮಂಡ್ಯದ ಶ್ರೀರಂಗಪಟ್ಟಣದಲ್ಲಿ ಹಿಂದು ಜಾಗರಣ ವೇದಿಕೆಯು ಶ್ರೀ ಮೂಡಲ ಬಾಗಿಲು ಆಂಜನೇಯಸ್ವಾಮಿ ದೇವಸ್ಥಾನದ ಪುನರ್‌ ನಿರ್ಮಾಣದ *ಹನುಮ ಮಾಲೆ* ಯ ಪ್ರಚಾರಕ್ಕಾಗಿ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಂಡಿತು. ಪ್ರಚಾರದ ಪೋಸ್ಟರ್ ಬಿಡುಗಡೆ ಕಾರ್ಯಕ್ರಮವು ಬೆಳಗ್ಗೆ 10:30ಕ್ಕೆ ನಡೆಯಿತು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡರು.

 

ಮಾಲೆ ಧಾರಣೆ ಡಿಸೆಂಬರ್ 6, 2024ರಿಂದ ತಾಲ್ಲೂಕು ಕೇಂದ್ರಗಳಲ್ಲಿ ಪ್ರಾರಂಭವಾಗಿ, ಡಿಸೆಂಬರ್ 15, 2024ರಂದು ಬೆಳಗ್ಗೆ 10:00ಕ್ಕೆ ಗಂಜಾಂ ನಿಮಿಷಾಂಭ ದೇವಸ್ಥಾನದಲ್ಲಿ ಬೃಹತ್ ಸಮಾವೇಶ ನಂತರ 11:30ಕ್ಕೆ ಶ್ರೀ ರಂಗನಾಥಸ್ವಾಮಿ ದೇವಸ್ಥಾನದವರೆಗೆ ಸಂಕೀರ್ತನಾ ಯಾತ್ರೆ ಕೂಡ ನಡೆಯಲಿದೆ.