ಹಿರಿಯರ ಆಶೀರ್ವಾದದೊಂದಿಗೆ:ಸೇವಾ ಜಾಗರಣ ತುಂಬೆ ಗೋಪೂಜೆ ಉತ್ಸವ

  • 02 Nov 2024 09:34:29 AM

ತುಂಬೆ  - *ಸೇವಾ ಜಾಗರಣಾ* ತುಂಬೆ ಆಶ್ರಯದಲ್ಲಿ ನಡೆಯುವ ವಾರ್ಷಿಕ ಗೋಪೂಜಾ ಉತ್ಸವ ಈ ವರ್ಷ ಹಿರಿಯ ಸ್ವಯಂಸೇವಕರಾದ ಶ್ರೀ ಪ್ರದೀಪ್ ಕುಮಾರ್ ಮತ್ತು ಶ್ರೀಮತಿ ಇಂದಿರಾ ಮುದಲ್ಮೆ, ತುಂಬೆ ದಂಪತಿಗಳ ಮನೆಯಲ್ಲಿ ಅದ್ಧೂರಿಯಾಗಿ ಆಯೋಜಿಸಲಾಯಿತು. 

ಈ ಕಾರ್ಯಕ್ರಮದಲ್ಲಿ ಹಿಂದೂ ಮುಖಂಡರಾದ ಶ್ರೀ ಜಗದೀಶ್ ಹೊಳ್ಳರಬೈಲ್, ಮಾಜಿ ತಾಲೂಕು ಪಂಚಾಯತ್ ಸದಸ್ಯ ಶ್ರೀ ಗಣೇಶ್ ಸುವರ್ಣ, ಹಿರಿಯರಾದ ಶ್ರೀ ನಾರಾಯಣ್ ಕಿರೋಡಿಯನ್, ಶ್ರೀ ಜಗದೀಶ್ ಕಡೆಗೋಳಿ, ಶ್ರೀ ವಿಜಯ್ ಕುಮಾರ್ ಕಜೆಕಂಡ, ಶ್ರೀ ಯೋಗೀಶ್ ಕೋಟ್ಯಾನ್, ಹಾಗೂ ಶ್ರೀಮತಿ ಜಲಜಾಕ್ಷಿ ಕೋಟ್ಯಾನ್ ಮುಂತಾದ ಪ್ರಮುಖರು ಭಾಗವಹಿಸಿದರು.

ಗೋಮಾತೆಯ ಮಹತ್ವ ಈ ದಿನಕ್ಕೆ ಮಾತ್ರ ಸೀಮಿತವಾಗಬಾರದು.ಗೋವಿನ ಸಂರಕ್ಷಣೆ ಪಾಲನೆ ಹಿಂದೂಗಳ ಭಾಗ್ಯವೆಂಬುದು ನಮ್ಮ ನಿಮ್ಮೆಲ್ಲರ ಮನದಲ್ಲಿರಬೇಕು ಎಂಬುದು ಹಿರಿಯರ ಆಶಯ.