ಭಜನಾ ಪರಂಪರೆ ಉಳಿಸಿ, ಸಂಘಟನೆಯನ್ನ ಗಟ್ಟಿಗೊಳಿಸಿ:ಮಂಗಳೂರಿನಲ್ಲಿ ಮಹತ್ವದ ಚರ್ಚಾ ವೇದಿಕೆ

  • 19 Nov 2024 12:59:55 PM

ಮಂಗಳೂರು: ನಮ್ಮ ಜಿಲ್ಲೆಯಾದ್ಯಂತ ಅನೇಕ ಭಜನಾ ತಂಡಗಳಿವೆ. ಆದರೆ ನಾವೆಲ್ಲರೂ ಭಜಕರು ಒಂದಾದರೆ ಮಾತ್ರ ಭಜನಾ ತಂಡಗಳನ್ನು ಗಟ್ಟಿಗೊಳಿಸಬಹುದು.ಭಜನೆಗೆ ಟೀಕೆಗಳು ಬಾರದಂತೆ ಒಂದು ಚೌಕಟ್ಟನ್ನು ಹಾಕಿಕೊಳ್ಳಬಹುದು ಮತ್ತು ಭಜನಾ ಮಂಡಳಿಗಳಿಗೆ ಸರಕಾರದ ಕೆಲವೊಂದು ಸವಲತ್ತುಗಳನ್ನು ಯಾವ ರೀತಿಯಾಗಿ ತರಿಸಿಕೊಳ್ಳಬಹುದು ಎನ್ನುವ ಈ ರೀತಿಯ ಎಲ್ಲಾ ವಿಚಾರಗಳನ್ನು ಮನಗಂಡು  ಭಜನಾ ಕ್ಷೇತ್ರದ ಪ್ರಮುಖರುಗಳಿಂದ ಕರಾವಳಿ ಭಜನಾ ಸಂಸ್ಕಾರ ವೇದಿಕೆ ಮಂಗಳೂರು ಆರಂಭವಾಗಿದೆ.

ಇದೇ ಬರುವ 24 ತಾರೀಕು ಆದಿತ್ಯವಾರ ಮಧ್ಯಾಹ್ನ 02:30ಕ್ಕೆ ಮಂಗಳೂರಿನಲ್ಲಿ ನಡೆಯುವ ಮಹತ್ವದ ಸಭೆಗೆ  ಎಲ್ಲಾ ಮಂಡಳಿಗಳಿಂದಲೂ ಮಂಡಳಿಯ ಪ್ರಮುಖರು, ನಿರ್ವಾಹಕರು ಮತ್ತು ಪದಾಧಿಕಾರಿಗಳು ಹೆಚ್ಚಿನ  ಸಂಖ್ಯೆಯಲ್ಲಿ ಪಾಲ್ಗೊಳ್ಳುವುದು.ನಿಮ್ಮ ತಂಡವನ್ನು ಪ್ರತಿನಿಧಿಸಿಕೊಂಡು ನೀವು ಬರುವುದರಿಂದ ನಿಮ್ಮ ಭಜನಾ ತಂಡದ ಮತ್ತು ನಿಮ್ಮ ಪರಿಚಯದ ಎಲ್ಲಾ ತಾಲೂಕಿನ ಭಜನಾ ಮಂಡಳಿಗಳಿಗೂ ಆಗುತ್ತದೆ. ಕೆಲವೊಂದು ಭಜನಾ ತಂಡಗಳನ್ನು ನಡೆಸುವಲ್ಲಿ ಉತ್ತಮ ಚಿಂತಕರು ತಂಡದಲ್ಲಿರುತ್ತಾರೆ. ಆದರೆ ಅವರಿಗೆ  ಬೆನ್ನೆಲುಬಾಗಿ ಸರಿಯಾದ ಸಹಕಾರಗಳಿರುವುದಿಲ್ಲ.ಅಂತಹ ನಿಮ್ಮ ಚಿಂತನೆಗಳಿಗೆ ಈ ವೇದಿಕೆ ದಾರಿದೀಪವಾಗುತ್ತದೆ. ಸಾಮಾನ್ಯ ಭಜನಾ ತಂಡಗಳು ಸಹ ತಮ್ಮ ಊರುಗಳಲ್ಲಿ ಅಸಮಾನ್ಯ ಸಾಧನೆಯನ್ನು ಮಾಡಲು ಸ್ಪೂರ್ತಿ ಮತ್ತು ಸಲಹೆ - ಸಹಕಾರ  ಸಿಗುತ್ತದೆ. ಹೆಚ್ಚಿನ ಸಂಖ್ಯೆಯಲ್ಲಿ ಬನ್ನಿ. 

ಪ್ರತಿ ಗ್ರಾಮಗಳಲ್ಲೂ, ಪ್ರತಿ ಊರುಗಳಲ್ಲೂ ಭಜನಾ ಮಂಡಳಿಗಳನ್ನು ಗಟ್ಟಿಗೊಳಿಸೋಣ. ಪ್ರತಿಯೊಬ್ಬರಿಗೂ ಭಜನೆಯ ಮೇಲೆ ಆಸಕ್ತಿ ಬರುವಂತೆ ಭಜನೆಗೊಂದು ಉತ್ತಮವಾದ ಚೌಕಟ್ಟನ್ನ ನಿರ್ಮಿಸೋಣ. 

*ಗೌರವಾಧ್ಯಕ್ಷರು/ ಅಧ್ಯಕ್ಷರು/ ಪ್ರಧಾನ ಕಾರ್ಯದರ್ಶಿಗಳು/ ಕೇಂದ್ರ ಸಮಿತಿ, ಕರಾವಳಿ ಭಜನಾ ಸಂಸ್ಕಾರ ವೇದಿಕೆ, ಮಂಗಳೂರು*