*ಏನಿದು ವಖ್ಫ್ ಬೋರ್ಡ್?* - ವಿಶ್ವ ಹಿಂದೂ ಪರಿಷತ್‌ ಜಾಗೃತಿ ಶಿಬಿರ *ನಮ್ಮ ಭೂಮಿ ನಮ್ಮ ಸೊತ್ತು* - ಡಿಸೆಂಬರ್ 1ಕ್ಕೆ ಕೊಂಡೆವೂರಿನಲ್ಲಿ ವಖ್ಫ್ ಬೋರ್ಡ್‌ ಕುರಿತು ವಿಶೇಷ ಜನಜಾಗೃತಿ ಶಿಬಿರ !!

  • 24 Nov 2024 03:51:49 PM

ಕಾಸರಗೋಡು: ವಿಶ್ವ ಹಿಂದೂ ಪರಿಷತ್ ಕಾಸರಗೋಡು ಜಿಲ್ಲೆಯ ಸೇವಾ ವಿಭಾಗವು *ಏನಿದು ವಖ್ಫ್ ಬೋರ್ಡ್...?* ಎಂಬ ವಿಶೇಷ ಜಾಗೃತಿ ಶಿಬಿರವನ್ನು ಡಿಸೆಂಬರ್ 1, 2024ರಂದು ಕೊಂಡೆವೂರು ಮಠದ ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ ಆಯೋಜಿಸಿದೆ. ಈ ಶಿಬಿರದ ಉದ್ದೇಶ, ವಖ್ಫ್ ಬೋರ್ಡ್‌ನ ಪರಿವಿಡಿ, ಅದರ ಪ್ರಭಾವ ಹಾಗೂ ಜನರ ಆಸ್ತಿಪಾಸ್ತಿ ಕುರಿತ ವಿವಾದಾತ್ಮಕ ವಿಷಯಗಳ ಬಗ್ಗೆ ತಿಳುವಳಿಕೆ ನೀಡುವುದಾಗಿದೆ. ಶಿಬಿರವು ಸಂಜೆ 4 ಗಂಟೆಗೆ ಆರಂಭವಾಗಿ, *ಪರಮಪೂಜ್ಯ ಶ್ರೀ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಅವರು ಕಾರ್ಯಕ್ರಮದಲ್ಲಿ ದಿವ್ಯ ಉಪನ್ಯಾಸ ನೀಡಲಿದ್ದಾರೆ*.

 

*ಯುವ ವಾಗ್ಮಿ ಶ್ರೀ ಲತೇಶ್ ಬಾಕ್ರಬೈಲು* ಅವರು ವಖ್ಫ್ ಬೋರ್ಡ್ ಮತ್ತು ಅದರ ಪ್ರಭಾವದ ಕುರಿತು ಮಾಹಿತಿ ನೀಡಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಶ್ವ ಹಿಂದೂ ಪರಿಷತ್ ಕಾಸರಗೋಡು ಜಿಲ್ಲಾಧ್ಯಕ್ಷ *ಶ್ರೀ ಜಯದೇವ ಖಂಡಿಗೆ* ವಹಿಸಲಿದ್ದಾರೆ. *ಶ್ರೀ ಅಡ್ವ. ಕರಣಾಕರನ್* ಸಹಕಾರ ಭಾರತಿ ಅಧ್ಯಕ್ಷರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.

 

 ಶಿಬಿರದ ಪ್ರಮುಖ ವಿಷಯವಾದ *ನಮ್ಮ ಭೂಮಿ ನಮ್ಮ ಸೊತ್ತು - ತಿಳಿಯೋಣ ಬನ್ನಿ ಏನಿದು ವಖ್ಫ್* ಎಂಬ ನಿಲುವಿನಲ್ಲಿ ಶಿಬಿರವು ಜನರಲ್ಲಿ ಜಾಗೃತಿ ಮೂಡಿಸುವುದು ಇದರ ಮುಖ್ಯ ಉದ್ದೇಶವಾಗಿದೆ.

 

ಈ ಕಾರ್ಯಕ್ರಮದ ಮೂಲಕ, ಭೂಸಂಬಂಧಿತ ವಿವಾದಗಳು ಮತ್ತು ಆಸ್ತಿಯ ಕುರಿತಾಗಿ ನಡೆಯುತ್ತಿರುವ ವಿಷಯಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸೂದರ ಬಗ್ಗೆ ಪ್ರಯತ್ನ ಮಾಡಲಿದೆ. *ಎಚ್ಚೆತ್ತು ಕೊಳ್ಳದಿದ್ದರೆ, ಮುದೊಂದು ದಿನ ಸತ್ಯ ತಿಳಿಯುವಷ್ಟರಲ್ಲಿ ನಮ್ಮದು ನಮ್ಮದಲ್ಲದಾಗುವ ಸಾಧ್ಯತೆ ಇದೆ* ಆದ್ದರಿಂದ ಸಾಧ್ಯವಾದಷ್ಟು ಸಂಖ್ಯೆಯಲ್ಲಿ ಸಮಾಜದ ಯುವಕರು ಹಾಗೂ ಇತರರು ಶಿಬಿರದಲ್ಲಿ ಭಾಗಿಯಾಗಿ, ಪ್ರಯೋಜನವನ್ನು ಪಡೆದು ಕಾರ್ಯಕ್ರಮವನ್ನು ಯಶಸ್ವಿಸಯಾಗಿಸ ಬೇಕೆಂದು ವಿನಂತಿಸುತ್ತಿದ್ದಾರೆ.