ಬಾಯರಿನಲ್ಲಿ ಹನುಮಗಿರಿ ಮೇಳದ ಸಾಕೇತ ಸಾಮ್ರಾಜ್ಞಿ ಯಕ್ಷಗಾನ : ವಿದ್ಯಾ ಕೇಂದ್ರದ ಸೇವೆಗೆ ಶ್ರೀ ಗಳಿಂದ ಗೌರವ!!

  • 27 Nov 2024 07:57:38 PM

ಬಾಯರು,ನವೆಂಬರ್ 23: ಶ್ರೀ ಶ್ಯಾಮ ಸೂರ್ಯ ಮುಳಿಗದ್ದೆ ಮತ್ತು ಬಳಗದವರು ಪ್ರಾಯೋಜಿಸಿದ ಹನುಮಗಿರಿ ಮೇಳದವರ *ಸಾಕೇತ ಸಾಮ್ರಾಜ್ಞಿ* ಯಕ್ಷಗಾನ ಕಾರ್ಯಕ್ರಮವು ಪ್ರಶಾಂತಿ ವಿದ್ಯಾ ಕೇಂದ್ರದಲ್ಲಿ ನಡೆಯಿತು.

 

ಕಾರ್ಯಕ್ರಮದಲ್ಲಿ ಎಡನೀರು ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮಿಗಳು ಮತ್ತು ಕರ್ನಾಟಕ ಮಾನವ ಹಕ್ಕು ಆಯೋಗದ ಅಧ್ಯಕ್ಷರಾದ ಶ್ರೀ ಟಿ.ಶ್ಯಾಮ ಭಟ್ IAS ಉಪಸ್ಥಿತರಿದ್ದರು.

 

ಪ್ರಶಾಂತಿ ವಿದ್ಯಾ ಕೇಂದ್ರದ ರಜತ ಮಹೋತ್ಸವದ ಆಚರಣೆಯ ಈ ಸುಸಂದರ್ಭದಲ್ಲಿ ಸಂಸ್ಥೆಯು ಶೈಕ್ಷಣಿಕ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಸಲ್ಲಿಸುತ್ತಿರುವ ಸೇವೆಗೆ ಶ್ರೀ ಗಳು ಸಂಸ್ಥೆಯನ್ನು ಗೌರವಿಸಿದರು.

ವಿದ್ಯಾ ಕೇಂದ್ರದ ಪರವಾಗಿ ಶ್ರೀ ಯಚ್.ಮಹಾಲಿಂಗ ಭಟ್ ಅವರು ಗೌರವವನ್ನು ಸ್ವೀಕರಿಸಿದರು.

 

 ಕಾರ್ಯಕ್ರಮದ ನಿರೂಪಣೆಯನ್ನು ಶ್ರೀ ಶ್ಯಾಮ ಸೂರ್ಯ ಮತ್ತು ಶ್ರೀ ಹರೀಶ ಬಳಂತಿಮೊಗರು ಅವರು ನಿರ್ವಹಿಸಿದರು.