ಬೆಳ್ತಂಗಡಿ: ನಮ್ಮ ವೀರಕೇಸರಿ ಬೆಳ್ತಂಗಡಿ ಸಂಘಟನೆಯ #200ನೇ ಸೇವಾಯೋಜನೆಯಾದ #8ನೇ #ಆಸರೆ ಮನೆಯ ಭೂಮಿಪೂಜಾ ಕಾರ್ಯಕ್ರಮವು 25/11/2024 ರಂದು ನಮ್ಮ ತಾಲೂಕಿನ ಕಲ್ಮಂಜ ಗ್ರಾಮದ ಅಂತರಬೈಲು ಪಾದೆಮೇಲಿನಲ್ಲಿ ನಡೆಯಿತು.
ಈ ಸಂದರ್ಭದಲ್ಲಿ 183 ಮತ್ತು 184 ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವ ಎರಡು ಕುಟುಂಬಗಳಿಗೆ ಯೋಜನೆಗಳನ್ನು ಪರಮಪೂಜ್ಯ ಸ್ವಾಮೀಜಿಯವರ ಹಾಗೂ ಗಣ್ಯ ವ್ಯಕ್ತಿಗಳ ತಂಡದ ಸದಸ್ಯರ ಸಮ್ಮುಖದಲ್ಲಿ ಹಸ್ತಾಂತರಿಸಲಾಯಿತು. ಮನೆ ನಿರ್ಮಾಣ ಕೆಲಸ ಕಾರ್ಯಗಳು ಈಗಾಗಲೇ ಪ್ರಾರಂಭಗೊಂಡಿದೆ. ಮುಂದಿನ ಹಂತಗಳಿಗಾಗಿ ನಿಮ್ಮೆಲ್ಲರ ಸಹಕಾರವನ್ನು ಕೇಳಿಕೊಳ್ಳುತ್ತಿದ್ದೇವೆ .
ಈ ಸಂದರ್ಭದಲ್ಲಿ ನಮ್ಮೊಂದಿಗೆ ಗಣ್ಯವ್ಯಕ್ತಿಗಳಾದ,
ಪರಮ ಪೂಜ್ಯ ಶ್ರೀ ನಾಗಸಾಧು ತಪೋನಿಧಿ ಬಾಬಾ ಶ್ರೀ ವಿಠ್ಠಲ್ ಗಿರಿ ಜಿ ಮಹಾರಾಜ್
ಪಂಚಾಯಿತಿ ಅಖಾಡ ಶ್ರೀನಿರಂಜನಿ, ಮಾಯಾಪುರಿ ಹರಿದ್ವಾರ್
ಸನ್ಮಾನ್ಯ ಶ್ರೀ ಮೋಹನ್ ಕುಮಾರ್
ಲಕ್ಷ್ಮೀ ಗ್ರೂಪ್ ಉಜಿರೆ ಮಾಲೀಕರು, ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್ ಸ್ಥಾಪಕಾಧ್ಯಕ್ಷರು
ಸನ್ಮಾನ್ಯ ಶ್ರೀ ವೆಂಕಟರಮಣ ಶರ್ಮಾ ಗುರುವಾಯನಕೆರೆ
ಭಾರತೀಯ ಸೇನೆ ನಿವೃತ್ತ ಮಾಜಿ ಸೈನಿಕರು
ಸನ್ಮಾನ್ಯ ಶ್ರೀ ಥೋಮಸ್ ಫಿಲಿಪ್
ಭಾರತೀಯ ಸೇನೆ ವೀರ ಯೋಧ
ಸನ್ಮಾನ್ಯ ಶ್ರೀ ಗಣೇಶ್ ಕುಲಾಲ್ ಕೆದಿಲ
ಸಹ ಸಂಯೋಜಕ, ಹಿಂದೂ ಜಾಗರಣ ವೇದಿಕೆ ಮಂಗಳೂರು ಮಹಾನಗರ
ಸನ್ಮಾನ್ಯ ಶ್ರೀ ಕೃಷ್ಣಮೂರ್ತಿ ಮಧುಗಿರಿ ತುಮಕೂರು
ಲೆಕ್ಕ ಪರಿಶೋಧಕರು ಮತ್ತು ತೆರಿಗೆ ಸಲಹೆಗಾರರು, ತುಮಕೂರು ಜಿಲ್ಲೆ
ಸನ್ಮಾನ್ಯ ಶ್ರೀ ವಿಜಯಕುಮಾರ್ ಜೈನ್
ಆಮಂತ್ರಣ ಪರಿವಾರ ಸ್ಥಾಪಕಾಧ್ಯಕ್ಷರು
ಶ್ರೀ ಹರ್ಷೇಂದ್ರ ಗುಡಿಗಾರ್
ಸಂಚಾಲಕರು, ರಾಷ್ಟ್ರೀಯ ತುಳು ಗುಡಿಗಾರ ಸಂಘ (ರಿ)
ಶ್ರೀ ರವೀಂದ್ರ ಗುಡಿಗಾರ್
ಅಧ್ಯಕ್ಷರು, ರಾಷ್ಟ್ರೀಯ ತುಳು ಗುಡಿಗಾರ ಸಂಘ (ರಿ)
ಶ್ರೀಮತಿ ವಿಮಲಾ
ಅಧ್ಯಕ್ಷರು, ಗ್ರಾಮ ಪಂಚಾಯತ್ ಕಲ್ಮಂಜ
ಶ್ರೀಮತಿ ಪೂರ್ಣಿಮಾ
ಉಪಾಧ್ಯಕ್ಷರು, ಗ್ರಾಮ ಪಂಚಾಯತ್ ಕಲ್ಮಂಜ
ಶ್ರೀ ಕೃಷ್ಣಪ್ಪ ಗುಡಿಗಾರ್
ಗೌರವಧ್ಯಕ್ಷರು, ರಾಷ್ಟ್ರೀಯ ತುಳು ಗುಡಿಗಾರ ಸಂಘ (ರಿ)
ಶ್ರೀ ಪ್ರಭಾಕರ್ ಸಿ.ಜಿ. ಕನ್ಯಾಡಿ
ಸಮಾಜ ಸೇವಕರು
ಶ್ರೀ ಸತೀಶ್ ಶೆಟ್ಟಿ
ಸಂಚಾಲಕರು, ವೀರಕೇಸರಿ ಬೆಳ್ತಂಗಡಿ ಮತ್ತು ತಂಡದ ಸದಸ್ಯರು ಭಾಗವಹಿಸಿದ್ದರು.