ಕಾಸರಗೋಡಿನಲ್ಲಿ ವಕ್ಫ್ ಜನಜಾಗೃತಿ ಶಿಬಿರ ಯಶಸ್ವಿ!!!

  • 02 Dec 2024 08:36:42 AM

ಕಾಸರಗೋಡು: ವಿಶ್ವ ಹಿಂದೂ ಪರಿಷತ್ ಕಾಸರಗೋಡು ಜಿಲ್ಲೆಯ ಸೇವಾ ವಿಭಾಗದಿಂದ 'ವಖ್ಫ್ ಬೋರ್ಡ್' ಬಗೆಗಿನ ವಿಶೇಷ ತಿಳುವಳಿಕಾ ಜಾಗೃತಿ ಶಿಬಿರವು ಕೊಂಡೆವೂರು ಶ್ರೀ ನಿತ್ಯಾನಂದ ಯೋಗಶ್ರಮದಲ್ಲಿ ನಡೆಯಿತು. ಈ ಕಾರ್ಯಕ್ರಮಕ್ಕೆ ವಿಹಿಂಪ ಜಿಲ್ಲಾ ಅಧ್ಯಕ್ಷರಾದ ಶ್ರೀ ಜಯದೇವ ಖಂಡಿಗೆ ಅವರು ಅಧ್ಯಕ್ಷ ಸ್ಥಾನವನ್ನು ವಹಿಸಿದರು.ಸಹಕಾರ ಭಾರತಿ ಕೇರಳ ರಾಜ್ಯಾಧ್ಯಕ್ಷರಾದ ಶ್ರೀ ಕರುಣಾಕರ ನಂಬಿಯಾರ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

 

 ಯುವ ವಾಗ್ಮಿಯಾದ ಶ್ರೀ ಲತೇಶ್ ಬಾಕ್ರಬೈಲ್ ಅವರು ವಖ್ಫ್ ಬೋರ್ಡ್ ನ ಕುರಿತು ಸಮಗ್ರ ಮಾಹಿತಿಗಳನ್ನು ನೀಡಿ ಜನಜಾಗೃತಿ ಮೂಡಿಸಿದರು.

 

 ಈ ಕಾರ್ಯಕ್ರಮಕ್ಕೆ ಯಾದವ ಕೀರ್ತೇಶ್ವರ ಅವರು ಸ್ವಾಗತಿಸಿ ಶ್ರೀಮತಿ ಪದ್ಮಾ ಮೋಹನ್ ದಾಸ್ ಧನ್ಯವಾದ ಭಾಷಣವನ್ನು ನೆರವೇರಿಸಿದರು. ಕೊಂಡೆವೂರು ಶ್ರೀಗಳ ಉಪಸ್ಥಿತಿ ಮತ್ತು ಪೂರ್ಣ ಸಹಕಾರದೊಂದಿಗೆ ಕಾರ್ಯಕ್ರಮವು ಯಶಸ್ವಿಯಾಗಿ ಜರಗಿತು.ರಘು ಭಟ್ ಬಂದ್ಯೋಡ್ ಅವರು ಈ ಕಾರ್ಯಕ್ರಮವನ್ನು ನಿರೂಪಿಸಿದರು. ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಈ ಕಾರ್ಯಕ್ರಮದ ಪ್ರಯೋಜನವನ್ನು ಪಡೆದುಕೊಂಡರು.