ಬಾಂಗ್ಲಾದೇಶ ಹಿಂದೂಗಳ ಮೇಲಿನ ದೌರ್ಜನ್ಯವನ್ನು ಖಂಡಿಸಿ ಕಾಸರಗೋಡಿನಲ್ಲಿ ಬೃಹತ್ ಪ್ರತಿಭಟನಾ ಸಭೆ ಡಿಸೆಂಬರ್ 4ಕ್ಕೆ!!!!

  • 02 Dec 2024 08:39:08 AM

ಕಾಸರಗೋಡು: ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಹಿಂದೂಗಳ ಮೇಲಿನ ದೌರ್ಜನ್ಯವನ್ನು ಖಂಡಿಸಿ ಹಾಗೂ ಅವರ ರಕ್ಷಣೆಯ ಕುರಿತು ಬೃಹತ್ ಪ್ರತಿಭಟನಾ ಸಭೆ ಡಿಸೆಂಬರ್ 4 ಬುಧವಾರದಂದು ಸಂಜೆ 3 ಗಂಟೆಗೆ ಮಲ್ಲಿಕಾರ್ಜುನ ದೇವಸ್ಥಾನ ಪರಿಸರದಲ್ಲಿ ನಡೆಯಲಿದೆ. 

 

ಬಾಂಗ್ಲಾದೇಶ ಮತೀಯ ಅಲ್ಪಸಂಖ್ಯಾತ ಏಕತಾ ಸಮಿತಿಯು ಈ ಸಭೆಯನ್ನು ಆಯೋಜಿಸಿದೆ. *ಹಿಂದೂಗಳು ಒಂದಾಗಿ - ಹಿಂದೂಗಳ ರಕ್ಷಣೆಗೆ ಮುಂದಾಗಿ* ಎಂಬ ಘೋಷವಾಕ್ಯದೊಂದಿಗೆ ಹಿಂದೂ ಸಮುದಾಯದ ಏಕತೆಯನ್ನು ತೋರಿಸಲು ಕರೆ ನೀಡಿದೆ.

 

ಈ ಸಭೆಯಲ್ಲಿ ಬಾಂಗ್ಲಾದೇಶದ ಹಿಂದೂ ಸಮುದಾಯದ ಹಕ್ಕುಗಳಿಗಾಗಿ ಪ್ರಾಮಾಣಿಕ ಧ್ವನಿ ಎತ್ತುದರ ಮೂಲಕ ಹಿಂದೂಗಳ ಮೇಲೆ ನಡೆಯುವ ಹಿಂಸಾಚಾರವನ್ನು ನಿಲ್ಲಿಸಲು ಮತ್ತು ನ್ಯಾಯ ಒದಗಿಸಲು ಸರಕಾರದ ಗಮನ ಸೆಳೆಯುವುದು ಈ ಪ್ರತಿಭಟನೆಯ ಮುಖ್ಯ ಉದ್ದೇಶವಾಗಿದೆ.