ಕುಂಜತ್ತೂರು ಆರ್ಟ್ಸ ಅಂಡ್ ಸ್ಪೋರ್ಟ್ಸ್ ನೇತೃತ್ವದ ಸಮಗ್ರ ರಕ್ಷಣಾ ಯೋಜನೆ ಮತ್ತು ಆಯಷ್ಮಾನ್ ನೋಂದಣಿ ಶಿಬಿರ ಯಶಸ್ವಿ!!!!

  • 03 Dec 2024 02:54:22 PM

ಕುಂಜತ್ತೂರು: ಶ್ರೀ ಮಹಾಲಿಂಗೇಶ್ವರ ಆರ್ಟ್ಸ ಮತ್ತು ಸ್ಷೋರ್ಟ್ ಕ್ಲಭ್ (ರಿ) ಕುಂಜತ್ತೂರು ಇದರ ನೇತೃತ್ವದಲ್ಲಿ ಭಾರತೀಯ ಅಂಚೆ ಇಲಾಖೆ ಕಾಸರಗೋಡು ವಿಭಾಗ ಇಂಡಿಯಾ ಪೋಸ್ಟ್ ಪೇಮೆಂಟ್ ಭ್ಯಾಂಕ್ ಇದರ ಸಹಯೋಗದೊಂದಿಗೆ *ಸಮಗ್ರ ರಕ್ಷಣಾ ಯೋಜನೆ ಅಪಘಾತ ವಿಮೆ ಕ್ಯಾಂಪ್* ಮತ್ತು *ಆಯಷಮಾನ್ ಆರೋಗ್ಯ ಕಾರ್ಡು ನೋಂದಣಿ* ಕಾರ್ಯಕ್ರಮವು ಯಶಸ್ವಿಯಾಗಿ ಶ್ರೀ ಮಹಾಲಿಂಗೇಶ್ವರ ವಿಧ್ಯಾನಿಕೇತನದಲ್ಲಿ ನಡೆಯಿತು.

 

 

 

 ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆರ್ಟ್ಸ ಮತ್ತು ಸ್ಪೋರ್ಟ್ಸ್ ಕ್ಲಬ್ನ ಅಧ್ಯಕ್ಷ ರಾದ ಶ್ರೀಯುತ ಶೈಲೇಶ್ ಶೆಟ್ಟಿ ಅವರು ವಹಿಸಿದರು. ಮಂಜೇಶ್ವರ ಗ್ರಾಮ ಪಂಚಾಯತ್ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಶ್ರೀಯುತ ಯಾಧವ ಬಡಾಜೆ , ಶ್ರೀ ಮಹಾಲಿಂಗೇಶ್ವರ ವಿಧ್ಯಾನಿಕೇತನದ ಅಧ್ಯಕ್ಷರಾದ ಶ್ರೀಯುತ ಸುರೇಶ ಶೆಟ್ಟಿ, ಪಂಚಾಯತ್ ಸದಸ್ಯರಾದ ಶ್ರೀಯುತ ರಾಜೇಶ ಮಜಲು, ಅಪಘಾತ ವಿಮ ಯೋಜನೆಯ ಕೊಡಿನೆಟರ್ ಶ್ರೀಯುತ ರವಿರಾಜ್ ಮತ್ತು ಶ್ರೀಯುತ ನವೀನ ಕುಮಾರ್ ಮಜಲು ಮುಂತಾದವರು ಉಪಸ್ಥಿತರಿದ್ದರು. ರವಿಕಿರಣ್ ಅವರು ಕಾರ್ಯಕ್ರಮದ ಸ್ವಾಗತ ಭಾಷಣವನ್ನು ನೆರವೇರಿಸಿದರು. ಶ್ರೀಮತಿ ಸಂಧ್ಯಾ ಅವರು ಧನ್ಯವಾದ ಭಾಷಣವನ್ನು ಮಾಡಿದರು.