ಮುಳ್ಳೇರಿಯ: ವಿಶ್ವ ಹಿಂದೂ ಪರಿಷತ್ ಕಾರಡ್ಕ ಪಂಚಾಯತ್ ಸಮಿತಿ ರೂಪಿಕರಣ!!!

  • 03 Dec 2024 03:51:57 PM

ಮುಳ್ಳೇರಿಯಾ: ಮುಳ್ಳೇರಿಯಾದ ಗಣೇಶ ಕಲಾಮಂದಿರದಲ್ಲಿ ವಿಶ್ವ ಹಿಂದೂ ಪರಿಷತ್, ಮಾತೃಶಕ್ತಿ, ಬಜರಂಗದಳ ಮತ್ತು ದುರ್ಗ ವಾಹಿನಿಯ ಕಾರ್ಯಕರ್ತರ ಸಮಾವೇಶವು 2.12.24 ಸೋಮ ವಾರ ಜರಗಿತು. ಕಾಸರಗೋಡು ಗ್ರಾಮಾಂತರ ಪ್ರಖಂಡದ ಅಧ್ಯಕ್ಷ ಡಾ. ಶಿವರಾಮ ಭಟ್ ಅಧ್ಯಕ್ಷತೆಯನ್ನು ವಹಿಸಿದ ಈ ಸಭೆಯನ್ನು ಕಾಂಜಗಾಡ್ ಜಿಲ್ಲಾ ಮಾತೃ ಶಕ್ತಿ ಸಂಯೋಜಕಿ ಶ್ರೀಮತಿ ಸತಿ ಕೊಡೋತ್ ದೀಪ ಬೆಳಗಿಸಿ ಉದ್ಘಾಟಿಸಿದರು.

 

ಈ ವೇಳೆಯಲ್ಲಿ ವಿಶ್ವ ಹಿಂದೂ ಪರಿಷತ್ ಜಿಲ್ಲಾ ಧರ್ಮ ಪ್ರಸಾರ ಪ್ರಮುಖ ವಾಮನ ಆಚಾರ್ಯ ಭೋವಿಕ್ಕಾನ, ಬಿಎಮ್ಎಸ್ ಜಿಲ್ಲಾ ಸಮಿತಿ ಸದಸ್ಯ ಎಂಕೆ ರಾಘವನ್, ಮತ್ತು ಬಜರಂಗದಳ ಪ್ರಖಂಡ ಪ್ರಮುಖ ಭರತ್ ಕುಮಾರ್ ಅಡೂರು ಉಪಸ್ಥಿತರಿದ್ದು ಮಾತನಾಡಿದರು.

 

ಈ ಕಾರ್ಯಕ್ರಮದಲ್ಲಿ ಕಾರಡ್ಕ ಪಂಚಾಯತ್ ಖಂಡ ಸಮಿತಿಯ ರಚನೆ ನಡೆಯಿತು. ಸಮಿತಿಯ ಅಧ್ಯಕ್ಷರಾಗಿ ರಾಘವ ಪಿ ಮುಳ್ಳೇರಿಯ ಆಯ್ಕೆಯಾದರು, ಮತ್ತು ಪವನ್ ಕುಂಟಾರ್ ಪುರುಷೋತ್ತಮನ್ ಅವರನ್ನು ಉಪಾಧ್ಯಕ್ಷರಾಗಿ ನೇಮಕ ಮಾಡಲಾಯಿತು. ಪ್ರಮುಖ ಕಾರ್ಯದರ್ಶಿಯಾಗಿ ಚಂದ್ರನ್ ಕಾರಡ್ಕ ಹಾಗೂ ಕಾರ್ಯದರ್ಶಿಗಳಾಗಿ ಪ್ರಶಾಂತ್ ಕಲ್ಲಂಕೂಡ್ಲು ಮತ್ತು ಹರಿದಾಸ್ ಬೆಳ್ಳಿಗೆ ಆಯ್ಕೆಯಾದರು. ಇದರೊಂದಿಗೆ, 13 ಸದಸ್ಯರ ಸಮಿತಿಯನ್ನು ರಚಿಸಲಾಯಿತು.

 

ಈ ಸಭೆಯಲ್ಲಿ ಪ್ರಮುಖರಾದ ರವಿಚಂದ್ರ ಎಡನೀರು, ಶಿವಕೃಷ್ಣ ಭಟ್, ರಾಮಕೃಷ್ಣ ಭಟ್, ಕೃಷ್ಣನ್, ಮತ್ತು ಸುರೇಶ್ ಬಾಬು ರವರು ಉಪಸ್ಥಿತರಿದ್ದರು. ಸಭೆಯ ಆರಂಭದಲ್ಲಿ ಪ್ರಶಾಂತ್ ಕಲ್ಲಂಕೂಡ್ಲು ಸ್ವಾಗತಿಸಿದರು. ಚಂದ್ರನ್ ಕಾರಡ್ಕ ವಂದಿಸಿದರು.