ಕುಂಬಳೆ ಪೇಟೆಯಲ್ಲಿ ಹಿಂದೂ ಐಕ್ಯವೇದಿ ಯ ವಕ್ಫ್ ಜನಜಾಗೃತಿ ಶಿಬಿರ!!!! ಡಿಸೆಂಬರ್ 10 ಕ್ಕೆ !!!!!4 ಗಂಟೆಗೆ!!!

  • 04 Dec 2024 04:37:43 PM

ಕುಂಬಳೆ: ವಕ್ಸ್ ಕಾಯ್ದೆ ಮತ್ತು ಅದರ ದುರುಪಯೋಗದ ವಿಷಯ ದೇಶಾದ್ಯಂತ ಚರ್ಚೆಯಾದ ವಿಷಯವಾಗಿದೆ. ಅನೇಕ ದೇವಾಲಯ, ಭೂಮಿಗಳು, ಹಾಗೂ ಬಡವರ ಆಸ್ತಿಗಳನ್ನು ವಕ್ಸ್ ಬೋರ್ಡ್‌ ತನ್ನ ವಶಪಡಿಸಿಕೊಳ್ಳುತ್ತಿದೆ. ಇದರಿಂದ ಸಾಮಾನ್ಯ ಜನರು ಹಾಗೂ ಸರ್ಕಾರದ ಆಸ್ತಿಗಳ ಮೇಲಿನ ಹಕ್ಕು ಕಳೆದು ಕೊಳ್ಳುವ ಹೆಚ್ಚಾದುದರಿಂದ ಇದರ ಕುರಿತಾದ ಜನಜಾಗೃತಿ ಶಿಬಿರವು 2024 ಡಿಸೆಂಬರ್ 10ರಂದು ಕುಂಬಳೆ ಪೇಟೆಯಲ್ಲಿ ಹಿಂದು ಐಕ್ಯವೇದಿಯ ಸಭೆ ನಡೆಯಲಿದೆ.

 

ಮುಖ್ಯವಾಗಿ, ಕೇರಳದ ಮುನಂಬದ ಪ್ರದೇಶದಲ್ಲಿ 400 ಎಕರೆ ಬಡ ಮೀನುಗಾರರ ಮನೆಗಳು ಮತ್ತು ಗದ್ದೆಗಳನ್ನು ವಕ್ಸ್ ಬೋರ್ಡ್ ತನ್ನದೇ ಎಂದು ಘೋಷಿಸಿದೆ.ಇದು ಸಂವಿಧಾನದ ಪ್ರಜಾಪ್ರಭುತ್ವ ತಂತ್ರದ ವಿರೋಧವಾಗಿದೆ ಎಂದು ಹಿಂದು ಐಕ್ಯವೇದಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಪಿ. ಹರಿದಾಸ್ ಹೇಳಿದ್ದಾರೆ.

 

ಆದ್ದರಿಂದ ಡಿಸೆಂಬರ್ 10ರಂದು ನಡೆಯುವ ಹಿಂದು ಐಕ್ಯವೇದಿ ಕುಂಬಳೆ ಯ ವಕ್ಫ್ ಜನಜಾಗೃತಿ ಶಿಬಿರಕ್ಕೆ ಎಲ್ಲ ವರ್ಗದ ಜನರು ಬಂದು ಈ ಕಾಯ್ದೆಯ ವಿರುದ್ಧ ಶಕ್ತಿಯಾಗಿ ನಿಲ್ಲಬೇಕು ಎಂದೂ ಸಾಂಸ್ಕೃತಿಕ ಸಾಮರಸ್ಯವನ್ನು ಕಾಪಾಡಲು ಸಹಕರಿಸಬೇಕೆಂದು ಸಂಘಟಕರು ಮನವಿ ಮಾಡಿಕೊಂಡಿದ್ದಾರೆ.