ಡಿಸೆಂಬರ್ 6, ದತ್ತ ಜಯಂತಿ ಪ್ರಯುಕ್ತ ವಿಶ್ವ ಹಿಂದೂ ಪರಿಷತ್ ಬಜರಂಗದಳ ಪುತ್ತೂರು ಇವರ ವತಿಯಿಂದ ನೆಲಪ್ಪಾಲು ಶ್ರೀ ವೀರಾಂಜನೇಯ ಕ್ಷೇತ್ರದಲ್ಲಿ ದತ್ತ ಮಾಲಾಚರಣೆ ಅಭಿಯಾನ!

  • 06 Dec 2024 01:19:47 PM

ಪುತ್ತೂರು, ಡಿ. 6: ಚಿಕ್ಕಮಂಗಳೂರಿನ ಚಂದ್ರದ್ರೋಣ ಪರ್ವತದಲ್ಲಿರುವ ದತ್ತಪೀಠದಲ್ಲಿ ವರ್ಷಂಪ್ರತಿ ವಿಶ್ವ ಹಿಂದೂ ಪರಿಷತ್ ಬಜರಂಗದಳದ ವತಿಯಿಂದ ನಡೆಯುವ ದತ್ತ ಜಯಂತಿ 2024 ಇದರ ಅಂಗವಾಗಿ ಡಿಸೆಂಬರ್ 6 ರಂದು ಪುತ್ತೂರು ನಗರ ವಿಶ್ವ ಹಿಂದೂ ಪರಿಷತ್ ಬಜರಂಗದಳ ಇವರ ವತಿಯಿಂದ ದತ್ತ ಮಾಲದರಣೆ ಅಭಿಯಾನವನ್ನು ಆಯೋಜಿಸಲಾಯಿತು.

 

ಈ ಅಭಿಯಾನ ಡಿಸೆಂಬರ್ 6ರಂದು ನೆಲಪ್ಪಾಲು ಶ್ರೀ ವೀರಾಂಜನೇಯ ಕ್ಷೇತ್ರದಲ್ಲಿ ಬಜರಂಗದಳ ಪುತ್ತೂರು ನಗರ ಸಂಯೋಜಕ ಜಯಂತ್ ಕುಂಜೂರುಪಂಜ ಅವರ ನೇತೃತ್ವದಲ್ಲಿ ಪ್ರಾರಂಭಿಸಿದರು.

 

ಕಾರ್ಯಕ್ರಮದಲ್ಲಿ ವಿಶ್ವ ಹಿಂದೂ ಪರಿಷದ್ ನಗರ ಪ್ರಖಂಡ ಅಧ್ಯಕ್ಷ ದಾಮೋದರ ಪಾಟಾಳಿ ಅವರು ಕಾರ್ಯಕರ್ತರಿಗೆ ಮಾರ್ಗದರ್ಶನ ನೀಡಿದರು. ಕಾರ್ಯಕ್ರಮದಲ್ಲಿ ವಿಶ್ವ ಹಿಂದೂ ಪರಿಷದ್ ಜಿಲ್ಲಾ ಸಹ ಕಾರ್ಯದರ್ಶಿ ಶ್ರೀಧರ್ ತೆಂಕಿಲ, ನಗರ ಪ್ರಖಂಡ ಕಾರ್ಯದರ್ಶಿ ಜೀತೆಶ್ ಬಲ್ನಾಡ್, ಪ್ರಖಂಡ ಸೇವಾ ಪ್ರಮುಖ್ ಹರೀಶ್ ದೋಳ್ವಾಡಿ, ಕಾರ್ಯಕರ್ತರಾದ ಜೀವನ್ ಬಲ್ನಾಡ್, ಧನರಾಜ್ ಬೆಳ್ಳಿಪ್ಪಾಡಿ, ಸಂಜಯ್ ಕುಪ್ಪೆಟ್ಟಿ ಮತ್ತು ಇತರ ಕಾರ್ಯಕರ್ತರು ಉಪಸ್ಥಿತರಿದ್ದರು.

 

ದತ್ತಪೀಠದ ಧಾರ್ಮಿಕ ಮತ್ತು ಸಾಂಸ್ಕೃತಿಕ ಮಹತ್ವವನ್ನು ಹಂಚಿಕೊಂಡು, ದತ್ತಮಾಲಧಾರಣೆಯ ಮೂಲಕ ಆಧ್ಯಾತ್ಮಿಕತೆ ಹಾಗೂ ಹಿಂದು ಸಂಸ್ಕೃತಿಯ ಉಳಿವಿಗೆ ಪ್ರೇರಣೆ ನೀಡುವುದು ಈ ಕಾರ್ಯಕ್ರಮದ ಉದ್ದೇಶವೆಂದು ಸಂಘಟಕರು ಹೇಳಿದ್ದಾರೆ.