ಬಂಟ್ವಾಳ: ಹಿಂ ಜಾ ವೇ ಬಂಟ್ವಾಳ ತಾಲೂಕು ಸಮಿತಿಯ ಇದರ ಆಶ್ರಯದಲ್ಲಿ ಅಯೋಧ್ಯೆ ಶ್ರೀ ರಾಮ ಜನ್ಮಸ್ಥಾನದ ಮುಕ್ತಿ ಆಂದೋಲನದ ವಿಜಯೋತ್ಸವದ ಅಂಗವಾಗಿ ಇಂದು ಬಿ.ಸಿ.ರೋಡಿನ ಶ್ರೀ ರಕ್ತೇಶ್ವರಿ ದೇವಸ್ಥಾನದಲ್ಲಿ ಸಾರ್ವಜನಿಕ ಸತ್ಯನಾರಾಯಣ ಪೂಜೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಪರಮಪೂಜ್ಯ ಶ್ರೀ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿಗಳು (ಶ್ರೀ ನಿತ್ಯಾನಂದ ಯೋಗಾಶ್ರಮ, ಕೊಂಡೆವೂರು ಮಠ, ಉಪ್ಪಳ) ಇವರು ವಹಿಸಿದ್ದರು.
ರಾಜ್ಯ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಲೋಕಯ್ಯ ಸೇರಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದರು. ಖ್ಯಾತ ಯಕ್ಷಗಾನ ಕಲಾವಿದ ದಿನೇಶ್ ಶೆಟ್ಟಿ ಕಾವಳಕಟ್ಟೆ ಅವರು ದಿಕ್ಸೂಚಿ ಭಾಷಣವನ್ನು ಮಾಡಿದರು.
ಹಿಂ ಜಾ ವೇ ಪ್ರಾಂತ ಕಾರ್ಯಕಾರಿಣಿ ಸದಸ್ಯರಾದ ಪ್ರಶಾಂತ್ ಕೆಂಪುಗುಡ್ಡೆ, ಜಿಲ್ಲಾ ಸಂಯೋಜಕ ನರಸಿಂಹ ಮಾಣಿ ಮತ್ತು ಬಂಟ್ವಾಳ ತಾಲೂಕು ಸಂಯೋಜಕ ಚಿದಾನಂದ ಕುಜ್ಲುಬೆಟ್ಟು ಮುಂತಾದವರು ಉಪಸ್ಥಿತರಿದ್ದರು.
ಈ ಕಾರ್ಯಕ್ರಮಕ್ಕೆ ಶ್ರೀಮತಿ ಗುರುಪ್ರಿಯ ನಾಯಕ್ ವೈಯಕ್ತಿಕ ಗೀತೆ ಹಾಗೂ ವಂದೇಮಾತರಂ ಗೀತೆ ಹಾಡಿದರು. ದುರ್ಗಾದಾಸ್ ಕಡೇಶಿವಾಲ್ಯಯ ಕಾರ್ಯಕ್ರಮವನ್ನು ನಿರೂಪಿಸಿ, ರಂಜಿತ್ ಧನುಪೂಜೆ ವಂದಿಸಿದರು.