ಕಲ್ಲಡ್ಕ: ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಲ್ಲಿ ನಡೆದ ಹೊನಲು ಬೆಳಕಿನ ಕ್ರೀಡೋತ್ಸವ 2024 ರ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸರಸಂಘಚಾಲಕ ಡಾ. ಮೋಹನ್ ಜೀ ಭಾಗವತ್ ಅವರು ಶ್ರೀರಾಮ ದೇವರಿಗೆ ಕ್ಷೀರಾಭಿಷೇಕ ಮಾಡುವ ಮೂಲಕ ಉದ್ಘಾಟಿಸಿದರು. *ಮಕ್ಕಳ ಅದ್ಭುತ ಸಾಹಸಮಯ ಪ್ರದರ್ಶನದ ವೀಕ್ಷಣೆಯ ನಂತರ ನನ್ನ ಭಾಷಣ ಅಗತ್ಯವಿಲ್ಲ ಎಂದು ತೋರುತ್ತದೆ. ಆದರೆ ಈ ವೇದಿಕೆಗೆ ಅತಿಥಿಯಾಗಿ ಅಹ್ವಾನಿತನಾದ ಮೇಲೆ ಒಂದೆರಡು ಮಾತುಗಳನ್ನು ಆಡಲೇಬೇಕಾಗುತ್ತದೆ ಆ ದೃಷ್ಟಿಯಿಂದ ಒಂದೆರಡು ಮಾತುಗಳನ್ನು ಮಂಡಿಸುತ್ತಿದ್ದೇನೆ* ಎಂದು ಹೇಳಿದರು.
ಭಾರತದ ಹೊಸ ಶಿಕ್ಷಣ ನೀತಿಯ ಬಗ್ಗೆ ಮಾತನಾಡಿದ ಅವರು, ಶ್ರೀರಾಮ ವಿದ್ಯಾಕೇಂದ್ರವು ಮೊಟ್ಟಮೊದಲೇ ಅಂಥ ದೃಷ್ಟಿಕೋನವನ್ನು ಇಟ್ಟುಕೊಂಡು ಕಾರ್ಯನಿರ್ವಹಿಸುತ್ತಿದೆ. ಇಂತಹ ದೀರ್ಘ ದೃಷ್ಟಿಯ ಶಿಕ್ಷಣ ಕಲ್ಪನೆಯನ್ನು ಅಳವಡಿಸಿಕೊಂಡ ಸಂಸ್ಥೆಯ ಸ್ಥಾಪಕ, ಸಂಚಾಲಕರಿಗೆ ಮತ್ತು ಕಾರ್ಯಕರ್ತರಿಗೆ ಅಭಿನಂದನೆಗಳು ಸಲ್ಲಿಸಿದರು. ಜೊತೆಗೆ *ಶಿಕ್ಷಿತ ಮನುಷ್ಯನು ತನ್ನ ಕುಟುಂಬಕ್ಕೆ ಮಾತ್ರವಲ್ಲ, ಇತರರಿಗೂ ಜ್ಞಾನವನ್ನು ಹಂಚುವ ಗುಣವನ್ನು ಬೆಳೆಸಿಕೊಳ್ಳಬೇಕು. ಕೇವಲ ಪುಸ್ತಕ ಓದುವುದರ ಮೂಲಕವೇ ಅಲ್ಲದೇ ಪ್ರೀತಿಯ ಗುಣವನ್ನು ಬೆಳೆಸುವ ಮೂಲಕವೂ ಸಮಗ್ರ ಶಿಕ್ಷಣ ಸಿಗಲು ಸಾಧ್ಯ* ಎಂದೂ ಶಿಕ್ಷಣವು ದೇಶದ ಸಂಸ್ಕೃತಿಯ ಜೊತೆಗೆ ಮತ್ತು ದುರ್ಬಲರ ಶ್ರೇಯೋಭಿವೃದ್ಧಿಗೆ ನೆರವಾಗಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶ್ರೀರಾಮ ವಿದ್ಯಾಕೇಂದ್ರದ ಸ್ಥಾಪಕ ಕಾರ್ಯದರ್ಶಿ ಡಾ. ಕಲ್ಲಡ್ಕ ಪ್ರಭಾಕರ್ ಭಟ್ಅವರು ಡಾ. ಮೋಹನ್ ಜೀ ಭಾಗವತ್ ಅವರ ಆಗಮನವನ್ನು *ಜಗತ್ತಿನ ಹಿಂದೂಗಳ ನಾಯಕರ ಆಗಮನ ನಮ್ಮ ಶಿಕ್ಷಣ ಸಂಸ್ಥೆಯ ದೊಡ್ಡ ಭಾಗ್ಯ* ಎಂದೂ ನಮ್ಮ ಶಿಕ್ಷಣ ಸಂಸ್ಥೆಗೆ ಇವರ ಮಾರ್ಗದರ್ಶನ ನಮ್ಮ ಪುಣ್ಯ ಎಂದು ಹೇಳಿದರು.