ಕುಂಭಾಶಿ: ನಮಸ್ತೆ ಭಾರತ್ ಟ್ರಸ್ಟ್ ರಿ. ಮಂದಾರ್ತಿ ವತಿಯಿಂದ ಶ್ರೀಕ್ಷೇತ್ರ ಮಂದಾರ್ತಿಯಲ್ಲಿ ಜನವರಿ 18 ರಂದು ನಡೆಯಲಿರುವ 108 ತಂಡಗಳ ರಾಷ್ಟ್ರೀಯ ಮಟ್ಟದ ಕುಣಿತ ಭಜನಾ ಸ್ಪರ್ಧೆ 'ಸಂಕೀರ್ತನ- ಮಂದಾರ್ತಿ'ಯ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದಲ್ಲಿ ನಿನ್ನೆ ನಡೆಯಿತು.
ಆನೆಗುಡ್ಡೆ ದೇವಳದ ಅನುವಂಶೀಯ ಧರ್ಮದರ್ಶಿಗಳಾದ ಶ್ರೀ ಕೆ.ರಮಣ ಉಪಾಧ್ಯಾಯರು ಕಾರ್ಯಕ್ರಮವನ್ನು ಉದ್ಘಾಟಿಸಿ ಭಜನೆಯ ಮಹತ್ವವನ್ನು ಜಗತ್ತಿಗೆ ಸಾರಲು ಹೊರಟಿರುವ ನಮಸ್ತೆ ಭಾರತ್ ಕಾರ್ಯ ಪ್ರಶಂಸನೀಯವಾದದ್ದು ಎಂದರು.ಟ್ರಸ್ಟ್ ಹಲವು ಮುಖಗಳಲ್ಲಿ ಈ ನೆಲದ ಸಂಸ್ಕೃತಿಯ ಬೀಜ ಬಿತ್ತುವ ಕೆಲಸ ಮಾಡುತ್ತಿದೆ.ಟ್ರಸ್ಟ್ ಮುಂದಿನ ದಿನಗಳಲ್ಲಿ ಹೆಮ್ಮರವಾಗಿ ಬೆಳೆದು ನೆರಳು ನೀಡುವಂತಾಗಲಿ ಎಂದು ಆಶೀರ್ವಚಿಸಿದರು.
ಕೊಲ್ಲೂರು ದೇಗುಲದ ಮಾಜಿ ಧರ್ಮದರ್ಶಿಗಳಾದ ಬಿ ಎಂ ಸುಕುಮಾರ್ ಶೆಟ್ಟಿಯವರು ಆಮಂತ್ರಣ ಪತ್ರಿಕೆಯನ್ನು ಬಿಡುಗಡೆ ಗೊಳಿಸಿದರು. ಮನಸ್ಸಿಗೆ ನೆಮ್ಮದಿ ನೀಡುವ ರಾಮಭಜನೆ ಮನೆಮನೆಗೆ ತಲುಪಬೇಕಿದೆ ಎನ್ನುವ ಅಶಯ ವ್ಯಕ್ತ ಪಡಿಸಿದರು. ಬಿ ಎಂ ಸುಕುಮಾರ್ ಶೆಟ್ಟರು ನಮಸ್ತೆ ಭಾರತ್ ಟ್ರಸ್ಟ್ ನ ಜನಪ್ರಿಯ ಕಾರ್ಯಕ್ರಮಗಳು ಮುಂದುವರೆಯಲಿ ಎಂದು ಹಾರೈಸಿದರು.
*ಸಂಕೀರ್ತನ ಮಂದಾರ್ತಿ ಸಮಾಜ ಬೆಸೆಯುವಕೆಲಸಮಾಡುತ್ತಿದೆ: ಕಾಳಾವರ್ಕರ್*
ರಾಷ್ಟ್ರೀಯತೆಯ ವಿಚಾರದಲ್ಲಿ ತೊಡಗಿಸಿಕೊಂಡ ನ್ಯಾಯವಾದಿಗಳಾದ ಸತೀಶ್ಚಂದ್ರ ಕಾಳಾವರ್ಕರವರು ಮಾತನಾಡಿದರು ಭಜನೆಯು ಸಮಾಜವನ್ನು ಒಗ್ಗೂಡಿಸುವ ಕೆಲಸ ಮಾಡುತ್ತದೆ ಇದರಿಂದ ವಿಭಜನೆಗೆ ಅವಕಾಶವಿಲ್ಲ. ನಮಸ್ತೆ ಭಾರತ್ ಟ್ರಸ್ಟ್ ಭಾರತೀಯ ಸಂಸ್ಕೃತಿಯನ್ನು ವಿಶ್ವವ್ಯಾಪಿಯಾಗಿಸುವುದರ ಮೂಲಕ ಸಮಾಜವನ್ನು ಬೆಸೆಯುವ ಕೆಲಸ ಮಾಡುತ್ತಿರುವುದು ಶ್ಲಾಘನೀಯವೆಂದರು.
*ಭಜಕರಿಗೆ ಭಗವಂತನ ಅಭಯ:ಕೊಲ್ಕೆರೆ*
ಸಮಾಜಪರ ಚಿಂತಕ ಹಾಗೆಯೇ ಭಜನಾ ತಂಡದ ಅಧ್ಯಕ್ಷರಾದ ಯುವ ನ್ಯಾಯವಾದಿ ವಿಕಾಸ್ ಹೆಗ್ಡೆ ಕೊಳ್ಕೆರೆಯವರು ಉತ್ತಮ ಸಂಸ್ಕಾರ ಹೊಂದಲು ಭಜನೆ ಅತ್ಯುತ್ತಮ ಆಯ್ಕೆಯಾಗಿದೆ, ಭಜನೆಗೆ ಹಾಗೂ ಶೃದ್ದೆಯ ಭಜಕರಿಗೆ ಭಗವಂತನ ಕೃಪೆ ಇದ್ದೇ ಇರುತ್ತದೆ. ಸಂಕೀರ್ತನ ಮಂದಾರ್ತಿ ಇಡೀ ಸಮಾಜವನ್ನು ತನ್ನತ್ತ ಸೆಳೆಯುವ ಮೂಲಕ ಭಜನೆಗೆ ನೀಡುವ ಪ್ರೋತ್ಸಾಹ ಅವಿಸ್ಮರಣೀಯವಾದುದು ಎಂದರು.
ಈ ಕಾರ್ಯಕ್ರಮದಲ್ಲಿ ಕಾವೇರಿ ಟ್ರಾನ್ಸ್‌ಪೋರ್ಟ್ ಮಾಲಕರಾದ ರಾಜೇಶ್ ಕಾವೇರಿ,ಕೃಷ್ಣಪ್ರಸಾದ್ ಕ್ಯಾಶ್ಯೂ ಮಾಲಕ ಸಂಪತ್‌ಕುಮಾರ್ ಶೆಟ್ಟಿ,ಮಾಜಿ ಜಿಲ್ಲಾಪಂಚಾಯತ್ ಸದಸ್ಯ ರಾಘವೇಂದ್ರ ಕಾಂಚನ್ ಬಾರಿಕೆರೆ, ಉದ್ಯಮಿ ಪ್ರಣಯ್ ಕುಮಾರ್ ಶೆಟ್ಟಿ, ನಮಸ್ತೆ ಭಾರತ್ ಟ್ರಸ್ಟ್ ನ ಪ್ರವೀಣ್ ಯಕ್ಷಿಮಠ ಮತ್ತಿತರರು ಉಪಸ್ಥಿತರಿದ್ದರು.
ನಮಸ್ತೆ ಭಾರತ್ ಟ್ರಸ್ಟ್ ನ ಪ್ರಮೋದ್ ಮಂದಾರ್ತಿ ಕಾರ್ಯಕ್ರಮವನ್ನು ನಿರೂಪಿಸಿದರು. ಉದಯ ಭಾಸ್ಲರ್ ಶೆಟ್ಟಿ ವಂದನಾರ್ಪಣೆ ನಡೆಸಿದರು. ಮಂದಾರ್ತಿ ಶ್ರೀರಾಮ ಭಜನಾ ಮಂಡಳಿ ವತಿಯಿಂದ ಭಜನಾ ಕಾರ್ಯಕ್ರಮ ಕೂಡ ನಡೆಯಿತು.