ಡಿಸೆಂಬರ್ 22ಕ್ಕೆ ಹಿಂ ಜಾ ವೆ ಯ ಧರ್ಮಜಾಗೃತಿಯ ಪಾದಯಾತ್ರೆ: ಸುವರ್ಣನಾಡಿನಿಂದ ಪೊಳಲಿಯವರೆಗೆ!

  • 10 Dec 2024 12:01:35 PM

ಸುವರ್ಣನಾಡು: ಹಿಂದು ಜಾಗರಣ ವೇದಿಕೆಯ ನೇತೃತ್ವದಲ್ಲಿ ಜರಗುವ 6ನೇ ವರ್ಷದ ಅಲಂತಹ ಪಾದಯಾತ್ರೆ ಡಿಸೆಂಬರ್ 22, 2024ರಂದು ಬೆಳಿಗ್ಗೆ 4:00 ಗಂಟೆಗೆ ಪ್ರಾರಂಭವಾಗಲಿದೆ. *ಸುವರ್ಣನಾಡಿನ ಶ್ರೀ ದುರ್ಗಾಂಬಿಕಾ ಸಿದ್ದೇಶ್ವರಿ ಸಾನಿಧ್ಯದಿಂದ ಶ್ರೀ ಕ್ಷೇತ್ರ ಪೊಳಲಿ ರಾಜರಾಜೇಶ್ವರಿ ದೇವಾಲಯದವರೆಗೆ* ಈ ಪಾದಯಾತ್ರೆ ನಡೆಯಲಿದೆ. 

*ಲೋಕಕಲ್ಯಾಣ ಹಾಗೂ ಇಷ್ಟಾರ್ಥ ಸಿದ್ಧಿಗಾಗಿ* ಆಯೋಜಿಸಲಾದ ಈ ಪಾದಯಾತ್ರೆ, ಧರ್ಮ ಮತ್ತು ಭಕ್ತಿಯ ಮಹತ್ವವನ್ನು ಸಾರಲು ಮುಖ್ಯ ವೇದಿಕೆಯಾಗುತ್ತಿದೆ. ದರ್ಮಜಾಗೃತಿಯತ್ತದ e ಕಾಲ್ನಡಿಗೆ ಯಾತ್ರೆಯು ಧಾರ್ಮಿಕ ತತ್ತ್ವಕ್ಕೆ ಪ್ರೇರಿತವಾಗಿದೆ. ಭಕ್ತರು ತಮ್ಮ ಧಾರ್ಮಿಕ ನಂಬಿಕೆಗಳನ್ನು ಪುನರುಜ್ಜೀವನಗೊಳಿಸಲು ಇದು ಒಂದು ಉತ್ತಮ ಅವಕಾಶ ನೀಡಲಿದೆ. 

ಈ ಪಾದಯಾತ್ರೆಯಲ್ಲಿ ಭಾಗವಹಿಸಲು ಹಿಂದು ಜಾಗರಣ ವೇದಿಕೆ ಎಲ್ಲರಿಗೂ ಆಹ್ವಾನ ನೀಡಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಈ ಪುಣ್ಯ ಪಾದಯಾತ್ರೆಯ ಭಕ್ತಿಯ ಹೆಜ್ಜೆಯ ಜೊತೆಗೆ ಎಲ್ಲರೂ ಸಾಕ್ಷಿಯಾಗೋಣ.