ವಿಶ್ವ ಹಿಂದೂ ಪರಿಷದ್ ಬಜರಂಗದಳ ಕಳೆಂಜ ಘಟಕದ ವತಿಯಿಂದ ದತ್ತಮಾಲಧಾರಣೆಗೆ ಚಾಲನೆ!

  • 10 Dec 2024 03:14:49 PM

ಬೆಳ್ತಂಗಡಿ: ಚಿಕ್ಕಮಗಳೂರಿನ ಚಂದ್ರದ್ರೋಣ ಪರ್ವತದಲ್ಲಿ ಇರುವ ದತ್ತಪೀಠದಲ್ಲಿ ವರ್ಷಂಪ್ರತಿ ನಡೆಯುವ ದತ್ತ ಜಯಂತಿ 2024 ಅಂಗವಾಗಿ ಡಿ. 10 ರಂದು ವಿಶ್ವ ಹಿಂದೂ ಪರಿಷದ್ ಬಜರಂಗದಳ ಕಳೆಂಜ ಘಟಕದ ವತಿಯಿಂದ ಶ್ರೀ ಉಮಾಮಹೇಶ್ವರ ದೇವಸ್ಥಾನ ಕಾಯರ್ತಡ್ಕದಲ್ಲಿ ದತ್ತಮಾಲಧಾರಣೆ ಅಭಿಯಾನಕ್ಕೆ ಚಾಲನೆ ನೀಡಲಾಯಿತು.

 

ಈ ಅಭಿಯಾನವನ್ನು ವಿ.ಹಿಂ.ಪ ಬಜರಂಗದಳ ಪುತ್ತೂರು ಜಿಲ್ಲಾ ಅಖಾಡ ಪ್ರಮುಖ್ ಗಣೇಶ್ ಕಳೆಂಜ ಅವರ ನೇತೃತ್ವದಲ್ಲಿ ಪ್ರಾರಂಭಿಸಲಾಯಿತು. ಈ ಮಹತ್ವಪೂರ್ಣ ಅಭಿಯಾನವು ಧಾರ್ಮಿಕ ಹಾಗೂ ಸಮಾಜ ಸೇವಾ ದೃಷ್ಟಿಯಿಂದ ಮಹತ್ವದ್ದಾಗಿರುತ್ತದೆ.