ಪುತ್ತಿಲ: ಶ್ರೀನಿವಾಸ ಕಲ್ಯಾಣೋತ್ಸವ; ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ

  • 11 Dec 2024 04:04:11 PM

ಪುತ್ತೂರು: ಪುತ್ತಿಲ ಪರಿವಾರ ಸೇವಾ ಟ್ರಸ್ಟ್ (ರಿ.) ಪುತ್ತೂರು ನೇತೃತ್ವದಲ್ಲಿ ಡಿಸೆಂಬರ್ 28, 29 ರಂದು ನಡೆಯಲಿರುವ ಶ್ರೀನಿವಾಸ ಕಲ್ಯಾಣೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ ಕಡಬದ ಶ್ರೀ ದುರ್ಗಾಂಬಿಕಾ ದೇವಸ್ಥಾನದ ಸಭಾಭವನದಲ್ಲಿ ವಿಜೃಂಭಣೆಯಿಂದ ನಡೆಯಿತು.

ಈ ಕಾರ್ಯಕ್ರಮದಲ್ಲಿ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಉಪಸ್ಥಿತರಿದ್ದು, ನೂತನ ಆಮಂತ್ರಣ ಪತ್ರಿಕೆಯನ್ನು ಅನಾವರಣಗೊಳಿಸಿದರು. ಉಮೇಶ್ ಕೋಡಿಬೈಲು, ರವಿಚಂದ್ರ ಶೆಟ್ಟಿ ಪುತ್ತೂರು, ಮಹೇಂದ್ರ ವರ್ಮ ಸೇರಿದಂತೆ ಹಲವು ಗಣ್ಯ ವ್ಯಕ್ತಿಗಳು ಉಪಸ್ಥಿತರಿದ್ದರು.

ಜನಾರ್ಧನ್ ರಾವ್ ಕಡಬ, ವೆಂಕಟರಮಣ ಕುತ್ಯಾಡಿ, ಸಂತೋಷ್ ಸುವರ್ಣ, ಸುರೇಶ್ ದುರ್ಗ ಗಣೇಶ್, ಸುಭಾಷ್ ಜನನಿ ಶಾಮಿಯಾನ, ಶ್ರೀಕಂಠ ಸ್ವಾಮಿ, ಶ್ರೀ ಮಹಾಗಣಪತಿ ದೇವಸ್ಥಾನದ ಅಧ್ಯಕ್ಷ ಸತೀಶ್ ಭೂಮಿಕಾ, ಕಿಶನ್ ಕುಮಾರ್ ರೈ ಪೆರಿಯಡ್ಕ, ರವೀಂದ್ರ ದಾಸ್ ಪುಂಜ, ರಾಜೇಶ್ ಪುಂಜ, ರಘುರಾಮ್ ಕುಕ್ಕೆರೆ ಬೆಟ್ಟು, ನಾಗೇಶ್ ಅಶ್ವಿನಿ ಸ್ಟುಡಿಯೋ, ಹರೀಶ್ ಕಾಳಿಕಾಂಬಾ ಫ್ಯಾಬ್ರಿಕೇಷನ್, ರಚನ್ ಅರ್ಪಾಜೆ ಯವರಂತೆ ಮತ್ತಿತರ ಪ್ರಮುಖರು ಸಮಾರಂಭದಲ್ಲಿ ಭಾಗವಹಿಸಿದ್ದರು.