ದರ್ಮತಡ್ಕ: ಯುವಶಕ್ತಿ (ರಿ) ಮತ್ತು ಯುವಕ ಸಂಘ ಧರ್ಮತ್ತಡ್ಕದ ಸಹಯೋಗದಲ್ಲಿ 23.12.2024 ಸೋಮವಾರದಂದು ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಧರ್ಮತ್ತಡ್ಕದ ಅಶ್ವತ್ಥ ಕಟ್ಟೆಯ ಹತ್ತಿರವಿರುವ ಸರೋಜಾ ಮಾಧವಂ ಸಭಾಭವನದಲ್ಲಿ ತಂತ್ರಿ ಶ್ರೀ ಸತ್ಯನಾರಾಯಣ ಭಟ್ ಕನಿಯಾಲ ಅವರ ಪೌರೋಹಿತ್ಯದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ನಡೆಯಲಿದೆ. ಈ ಸಂದರ್ಭದಲ್ಲಿ *ಗೀತಾಮೃತ ಪಾರಾಯಣ ತಂಡದ ನೇತೃತ್ವದಲ್ಲಿ ಮಧ್ಯಾಹ್ನ 2 ಗಂಟೆಗೆ ಶ್ರೀಮದ್ಭಗವದ್ಗೀತಾ ಪಾರಾಯಣ, 3 ಗಂಟೆಗೆ ಪೂಜಾ ಸಂಕಲ್ಪ ಮತ್ತು ಸಂಜೆ 6 ಗಂಟೆಗೆ ಮಹಾಮಂಗಳಾರತಿ ಮತ್ತು ಪ್ರಸಾದ ವಿತರಣೆ* ಸೇರಿದಂತೆ ಹಲವು ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.
ಶ್ರೀ ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿ, ಹನುಮಗಿರಿ ಇವರಿಂದ ನೂತನ ಪ್ರಸಂಗದ ಯಕ್ಷಗಾನ ಬಯಲಾಟವು ಸಂಜೆ 7 ಗಂಟೆಗೆ ಪ್ರಸಿದ್ಧ ಕಲಾವಿದರ ಅಭಿನಯದೊಂದಿಗೆ ನಡೆಯಲಿದೆ. ಅದಲ್ಲದೆ ಕಾರ್ಯಕ್ರಮದ ವೇಳೆ ಸಭಾಭವನದ ಮಾಲಕರಾದ ಶ್ರೀ ವಸಂತ ಪಂಡಿತ್, ಯಕ್ಷಗಾನ ಪ್ರಾಯೋಜಕರಾದ ಶ್ರೀ ಶಾಂಭವಿ ಫ್ಯಾಮಿಲಿ ಟ್ರಸ್ಟ್‌ನ ಮುಖ್ಯಸ್ಥರಾದ ಶ್ರೀ E.S. ಮಹಾಬಲೇಶ್ವರ ಭಟ್ ಹಾಗೂ ಅನಿವಾಸಿ ಭಾರತೀಯ ಶ್ರೀನಾಥ್ ಚೆಕ್ಕೆ ಅವರನ್ನು ಸನ್ಮಾನಿಸಲಾಗುವುದು.
ಈ ಪುಣ್ಯಧಾರ್ಮಿಕ ಕಾರ್ಯದಲ್ಲಿ ಭಾಗವಹಿಸಲು ಎಲ್ಲರಿಗೂ ಆಹ್ವಾನಿಸಲಾಗಿದ್ದು, ತನು-ಮನ-ಧನಗಳಿಂದ ಸಹಕರಿಸಿ, ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಯುವಶಕ್ತಿ (ರಿ) ಮತ್ತು ಯುವಕ ಸಂಘದ ಅಧ್ಯಕ್ಷರು ಮತ್ತು ಸದಸ್ಯರು ವಿನಂತಿಸಿದ್ದಾರೆ.
ಪೂಜಾ ವ್ರತಧಾರಿಗಳಲ್ಲಿಗೆ ವಿಶೇಷ ಸೂಚನೆಗಳು:
# ಪೂಜೆಯೊಂದರ ರೂ. 200/-ನ್ನು ನೀಡುವ ಮೂಲಕ ಕಾರ್ಯಕರ್ತರಿಂದ ರಶೀದಿ ಪಡೆದು, ಪೂಜೆಯ ದಿನ ರಶೀದಿ ಸಹಿತ ಸಮಯಕ್ಕೆ ಹಾಜರಾಗುವುದು.
# ವ್ರತಧಾರಿಗಳು 1 ಹರಿವಾಣ, 5 ಕುತ್ತೆ ಬೆಳ್ತಿಗೆ ಅಕ್ಕಿ, 1 ಸುಲಿದ ತೆಂಗಿನಕಾಯಿ, 5 ವೀಳ್ಯದ ಎಲೆ, 1 ಹಣ್ಣಡಿಕೆ ಮತ್ತು 1 ನಾಣ್ಯವನ್ನು ತರಬೇಕಾಗಿ ವಿನಂತಿ.
# ಪೂಜೆಯ ಹಿಂದಿನ ದಿನ ಮತ್ತು ಆ ದಿನದಂದು ವ್ರತದಲ್ಲಿದ್ದು ಸಾತ್ವಿಕ ಆಹಾರ ಸೇವಿಸಬೇಕು.
# ಅಕ್ಕಿಯಿಂದ ತಯಾರಿಸಿದ ಆಹಾರವನ್ನು ಸೇವಿಸದೆ, ಭಾರತೀಯ ಉಡುಪು ಧರಿಸಿ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು.
# ಭಕ್ತಾದಿಗಳಿಂದ ನೀಡುವ ಹೂ, ತುಳಸಿ, ಹಣ್ಣುಗಳನ್ನು ಕೃತಜ್ಞತಾಪೂರ್ವಕವಾಗಿ ಸ್ವೀಕರಿಸಲಾಗುವುದು.
# ಪೂಜಾ ರಶೀದಿ ಮಾಡಿಸಿದವರು ಪೂಜೆಯ ನಂತರ ಕೌಂಟರ್‌ನಲ್ಲಿ ಪ್ರಸಾದವನ್ನು ಪಡೆದುಕೊಳ್ಳುವುದು.
# ಪೂಜಾ ಶುಲ್ಕ ಅಥವಾ ದೇಣಿಗೆಯನ್ನು ಗೂಗಲ್ ಪೇ ಮೂಲಕ ಮಾಧವ.ಯನ್ - 9746338206 ಗೆ ನೀಡಬಹುದು.
ಎಲ್ಲಾ ಭಕ್ತಾದಿಗಳಿಗೂ ರಾತ್ರಿ ಗಂಟೆ 8 ಯಿಂದ ಪ್ರಸಾದ ಭೋಜನದ ವ್ಯವಸ್ಥೆ ಇರುತ್ತದೆ.