ಕಾಸರಗೋಡು: ಬೋವಿಕಾನ ಎ.ಯು.ಪಿ ಶಾಲೆಯ 2ನೇ ತರಗತಿಯಲ್ಲಿ ಓದುತ್ತಿರುವ ಅದ್ವಿಕ್ ರಾಜ್ ಎಂಬ ಬಾಲಕನು ತಮ್ಮ ಜನಪದ ಗೀತೆ ಗಾಯನದ ಮೂಲಕ Kerala Book of Records ಗೆ ಪಾತ್ರರಾಗಿದ್ದಾರೆ. ಜನಪದ ಗೀತೆಯ ಮೂಲಕ ದೇಶವನ್ನೇ ಆಕರ್ಷಿಸಿದ ಅದ್ವಿಕ್ ಅವರ ಹಾಡು ಮೂರು ದಿನಗಳಲ್ಲಿ ಅತಿ ಹೆಚ್ಚು ಜನ ವೀಕ್ಷಿಸಿದ ಗೀತೆಯಾಗಿ ದಾಖಲಾಗಿದೆ.
ಅದ್ವಿಕ್ ರಾಜ್, ಪ್ರಸಿದ್ಧ ಜನಪದ ಗಾಯಕನಾದ ರಾಜೇಶ್ ಪಾಂಡಿ ಮತ್ತು ರಜಿನಿ ಅವರ ಪುತ್ರನಾಗಿದ್ದಾನೆ.
2024ರ ಡಿಸೆಂಬರ್ 15ರಂದು ಅಂಗಮಾಲಿಯ ವೈರಾಗ್ ಭವನದಲ್ಲಿ ನಡೆಯುವ ಸನ್ಮಾನ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ತಿಳಿದು ಬಂದಿದೆ.
ಅಕ್ಟೋಬರ್ 18ರಂದು ಜಿಎಚ್‌ಎಸ್‌ಎಸ್ ಪಾಂಡಿ ಶಾಲೆಯ "ಬಾಲೆಟನ್ ಮೊಳಲ್ಲೆಡಿ" ಹಾಡು ವೈರಲ್ ಆಗಿ, ಲಕ್ಷಾಂತರ ವೀಕ್ಷಣೆಗಳೊಂದಿಗೆ ಜನಪ್ರಿಯತೆಯನ್ನು ಗಳಿಸಿತ್ತು. ಈ ಹಾಡು ಶಿಕ್ಷಣ ಸಚಿವ ಶಿವನ್ ಕುಟ್ಟಿ ಸೇರಿದಂತೆ ಪ್ರಮುಖರಿಂದ ಶೇರ್ ಆಗಿದ್ದು, ಸುಮಾರು 80 ಸ್ಥಳಗಳಲ್ಲಿ AdwikRaj ಕಾರ್ಯಕ್ರಮವನ್ನು ಪ್ರಸ್ತುತಪಡಿಸಿದ್ದಾರೆ.
ಅದ್ವಿಕ್ ರಾಜ್, ಕಾಸರಗೋಡು ತಂಡದ ಬಾಲ ಕಲಾವಿದನಾಗಿ ತಮ್ಮ ಪ್ರತಿಭೆ ಮೂಲಕ 24 ಚಾನೆಲ್ ಮತ್ತು ರಿಪೋರ್ಟರ್ ಚಾನೆಲ್‌ನಲ್ಲಿಯೂ ಕಾಣಿಸಿಕೊಂಡಿದ್ದಾರೆ. ಅದ್ವಿತ್ ಕಾಸರಗೋಡಿನ ಕಣ್ಣನ್ ತನಲ್ ಎಂಬ ತಂಡದ ಬಾಲ ಪ್ರತಿಭಾ ಕಲಾವಿದನಾಗಿದ್ದಾನೆ.