ಮತಾಂತರಕ್ಕೆ ಬದ್ಧ ವಿರುದ್ಧ ನಾರಾಯಣ ಗುರು ಸಿದ್ಧಾಂತ - ಶಿವಗಿರಿ ಸ್ವಾಮೀಜಿ

  • 04 Nov 2024 12:59:48 PM

ಜಾತೀಯತೆಯ  ಕಾರಣದಿಂದ ದೊಡ್ಡ ಪ್ರಮಾಣದಲ್ಲಿ ಮತಾಂತರಗೊಂಡ ಕೇರಳ ರಾಜ್ಯದಲ್ಲಿ ಹಿಂದುತ್ವ ಇವತ್ತು ಉಳಿದಿದ್ದರೆ ಅದು ನಾರಾಯಣ ಗುರುಗಳ ಪ್ರಯತ್ನದಿಂದ ಮತಾಂತರಕ್ಕೆ ಬದ್ಧ ವಿರುದ್ಧ ನಾರಾಯಣ ಗುರು ಸಿದ್ಧಾಂತ , ನಾವು ಹುಟ್ಟಿರುವ ಮತವೇ ನಮಗೆ  ಮೋಕ್ಷ ಒದಗಿಸಿ ಕೊಡುತ್ತದೆ ಎಷ್ಟೇ ಆಮಿಷ ಬಂದರೂ ನಾವು ಮತಾಂತರ ಆಗಬಾರದು ಬ್ರಹ್ಮ ಮೊಗೇರರು , ಬ್ರಹ್ಮ ಬೈದರ್ಕಳರ ಬದುಕೇ ನಮಗೆ ಆದರ್ಶ ಎಂದು ನಾರಾಯಣ ಗುರುವಿನ ಮೂಲ ಮಠದ ಶ್ರೀ ಶ್ರೀ ಶ್ರೀ ಸತ್ಯಾನಂದ ತೀರ್ಥ ಸ್ವಾಮೀಜಿ  ಸಾಮರಸ್ಯ ವೇದಿಕೆ ಮಂಗಳೂರು ವತಿಯಿಂದ ತಲಪಾಡಿ ಕೀನ್ಯ ಬ್ರಹ್ಮಮುಗೇರ ದೈವಸ್ಥಾನ ಮೀನಾದಿಯಲ್ಲಿ ನಡೆದ ಸಾಮರಸ್ಯದ ತುಡಾರ್ ಕಾರ್ಯಕ್ರಮದಲ್ಲಿ ಮಾತನಾಡಿದರು 


      ಇವತ್ತು ಎಲ್ಲಾ ಜಾತಿಯವರಿಗೆ ದೇವಸ್ಥಾನ , ಧರ್ಮಶಿಕ್ಷಣ ಸಿಗಬೇಕು ಎಂದು ಗುರುಗಳು ಅನೇಕ ಕೆಲಸ ಮಾಡಿದರು ಆದರಲ್ಲಿ ದೇವಸ್ಥಾನ ನಿರ್ಮಾಣ , ಕೆಳಜಾತಿಯ ಜನರಿಗೆ ದೇವಾಲಯ ಪ್ರವೇಶ , ಸಂಸ್ಕೃತ ಪಾಠಶಾಲೆ ಪ್ರಾರಂಭ ಮುಂತಾದ ಅನೇಕ ನಿದರ್ಶನಗಳ ಬಗ್ಗೆ ಸ್ವಾಮೀಜಿ ಬೆಳಕು ಚೆಲ್ಲಿದರೆ . ನಾವೆಲ್ಲ ಗುರುಗಳ ಸಂದೇಶದ ರೀತಿಯಲ್ಲಿ ವಿದ್ಯೆ ಪಡೆದು , ಸಂಘಟಿತರಾಗಿ ಸಮಾಜದ ಮುಖ್ಯ ವಾಹಿನಿಗೆ ಬರಬೇಕು ಎಂದು ಹೇಳಿದರ.


 
 ಮುಖ್ಯ ಭಾಷಣಕ್ಕೆ ಆಗಮಿಸಿದ ಸೂರಜ್ ಶೆಟ್ಟಿ ಜಲ್ಲಿಗುಡ್ಡೆ ಮಾತನಾಡು ಈ ವರ್ಷದ ದೀಪಾವಳಿ ಐದು ಶತಮಾನದ ಬಳಿಕ ಶ್ರೀರಾಮಚಂದ್ರ ಮತ್ತೆ ಅಯೋದ್ಯಾ ಪಟ್ಟಣಕ್ಕೆ ಬಂದ ವಿಶೇಷ ದೀಪಾವಳಿ , ಸಾಮರಸ್ಯದ ತುಡಾರ್ ಮನಸ್ಸುಗಳನ್ನು ಒಂದು ಮಾಡಲಿ ಜಾತಿ ಮತ ಮೀರಿದ ಮನಸ್ಸು ನಮ್ಮದಾಗಲಿ ಎಂಬ ಸಂದೇಶ ನೀಡಿದರು ಕ್ಷೇತ್ರದ ಗುರಿಕಾರರಾದ ಅಣ್ಣು ಗುರಿಕಾರ ಮೀನಾದಿ ,ಚರಣರಾಜ್ , ಅಶೋಕ್ ಕೊಂಡಾಣ , ನಾರಾಯಣ ಕೊಂಡಾಣ , ಪದ್ಮಾವತಿ , ಸುಂದರ್ ಅಂಚನ್ ಕೀನ್ಯ , ಸಾಮರಸ್ಯ ವೇದಿಕೆಯ ಕೇಶವ ವೇದಿಕೆಯಲ್ಲಿ ಉಪಸ್ಥಿತರಿದ್ದರು , ದೀಪಕ್ ಕೀನ್ಯ ಧನ್ಯವಾದ ಅರ್ಪಿಸಿದರು