ಗೋಳ್ತಮಜಲು : ವಿಶ್ವ ಹಿಂದೂ ಪರಿಷತ್ ಬಜರಂಗದಳ ಗೋಳ್ತಮಜಲು ಹಾಗೂ ಭಜರಂಗಿ ಸೇವಾ ಬ್ರಿಗೇಡ್ ಇವರ ಆಶ್ರಯದಲ್ಲಿ, ನಿತ್ಯ ಸಂಜೀವಿನಿ ಯೋಜನೆಯಡಿ ಮಿಥುನ್ ಪೂಜಾರಿ ಕಲ್ಲಡ್ಕ ಅವರ ನೇತೃತ್ವದಲ್ಲಿ ಬಡ ಕುಟುಂಬಕ್ಕೆ ಮನೆ ನಿರ್ಮಾಣ ಮಾಡುವ ಸಂಕಲ್ಪ ನಡೆಯಿತು. ಇವತ್ತಿಗೆ, ಮನೆ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, ಶ್ರೀ ಪರಮಪೂಜ್ಯನಿಯ ಡಾ| ಕಲ್ಲಡ್ಕ ಪ್ರಭಾಕರ ಭಟ್ ಜೀ ಅವರ ದಿವ್ಯ ಹಸ್ತದಿಂದ ಮನೆ ಹಸ್ತಾಂತರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಸಂಘಟನೆಯ ಪ್ರಮುಖರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು. ಹಗಲು, ರಾತ್ರಿ ತ್ಯಾಗ ಶ್ರಮದಿಂದ ಈ ಸೇವಾ ಕಾರ್ಯವನ್ನು ಯಶಸ್ವಿಯಾಗಿ ನೆರವೇರಿಸಿಸಲು ಕಾರಣಕರ್ತರಾದ ವಿಶ್ವ ಹಿಂದೂ ಪರಿಷತ್ ಭಜರಂಗದಳ ಗೊಳ್ತ ಮಜಲು ಹಾಗೂ ಭಜರಂಗಿ ಸೇವಾ ಬ್ರಿಗೇಡ್ ಅವರಿಗೆ ತುಂಬು ಹೃದಯದ ಧನ್ಯವಾದಗಳು .
ಹಾಗೆಯೇ ಪ್ರತ್ಯಕ್ಷ ವಾಗಿ ಮತ್ತು ಪರೋಕ್ಷವಾಗಿ ತನು ಮನ ಧನ ಸಹಾಯ ನೀಡಿ ಸಹಕರಿಸಿದ ಎಲ್ಲಾ ದಾನಿಗಳಿಗೂ ಈ ಸಾರ್ಥಕ ಕಾರ್ಯಕ್ಕೆ ತಮ್ಮ ಹೃದಯಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತಿದ್ದಾರೆ.