ಡಿ.22 ರಂದು ಸುವರ್ಣ ನಾಡಿನಲ್ಲಿ ಹಿಂದು ಜಾಗರಣ ವೇದಿಕೆಯ 6ನೆ ವರ್ಷದ ಪಾದಯಾತ್ರೆ; ಲೋಕಕಲ್ಯಾಣಕ್ಕಾಗಿ ಮತ್ತು ಸಕಲ ಇಷ್ಟಾರ್ಥ ಸಿದ್ದಿಗಾಗಿ !

  • 16 Dec 2024 01:05:01 PM

ಸುವರ್ಣನಾಡು: ಹಿಂದೂ ಜಾಗರಣ ವೇದಿಕೆ ಸುವರ್ಣ ನಾಡು ಆಯೋಜಿಸಿರುವ 6ನೇ ವರ್ಷದ ಪಾದಯಾತ್ರೆ (ಧರ್ಮ ಜಾಗೃತಿ ನಡೆ) ದಿನಾಂಕ 22-12-2024, ಆದಿತ್ಯವಾರ, ಬೆಳಿಗ್ಗೆ 4:00 ಗಂಟೆಗೆ ಸುವರ್ಣನಾಡು ಶ್ರೀ ದುರ್ಗಾಂಭಿಕ ಸಿದ್ದೇಶ್ವರಿ ಸಾನಿಧ್ಯದಿಂದ ಪ್ರಾರಂಭವಾಗಲಿದೆ.

 

ಈ ಧಾರ್ಮಿಕ ಪವಿತ್ರ ಯಾತ್ರೆಯು ಶ್ರೀ ಕ್ಷೇತ್ರ ಪೊಳಲಿ ರಾಜರಾಜೇಶ್ವರಿ ದೇವಸ್ಥಾನವರೆಗೆ ಕಾಲ್ನಡಿಗೆಯಾಗಿ ನಡೆಯುತ್ತದೆ. ಈ ಪಾದಯಾತ್ರೆ ಯು ಲೋಕಕಲ್ಯಾಣ ಮತ್ತು ಸಕಲ ಇಷ್ಟಾರ್ಥ ಸಿದ್ಧಿಗಾಗಿ ಸಾಧಿಸುವ ಮಹತ್ವದ ಕಾರ್ಯಕ್ರಮವಾಗಿದೆ.

 

ಈ ಕಾರ್ಯಕ್ರಮಕ್ಕೆ ಎಲ್ಲಾ ಹಿಂದೂ ಬಾಂಧವರಿಗೂ ಹಿಂದೂ ಜಾಗರಣ ವೇದಿಕೆ ಸುವರ್ಣ ನಾಡು ಸ್ವಾಗತವನ್ನು ಬಯಸುತ್ತಿದ್ದಾರೆ.

 

*ವಿ.ಸೂ: ಪಾದಯಾತ್ರೆ ಪೂರ್ಣಗೊಳಿಸಿದ ನಂತರ ಶ್ರೀ ಕ್ಷೇತ್ರ ಪೊಳಲಿ ಹಿಂದಿರುಗಲು ಬಸ್ಸು ವ್ಯವಸ್ಥೆ ಹಾಗೂ ಉಪಾಹಾರದ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಈ ಪುಣ್ಯಯಾತ್ರೆಯಲ್ಲಿ ಭಾಗವಹಿಸಿ ಧರ್ಮದ ಬೆಳಕಿಗೆ ಸಾಕ್ಷಿಯಾಗೋಣ.*