ಶ್ರೀನಿವಾಸ ಕಲ್ಯಾಣೋತ್ಸವ ಮತ್ತು ಧರ್ಮಸಂಗಮ: ಚಪ್ಪರ ಮಹೋತ್ಸವ - ಭವ್ಯ ಭಗವಧ್ವಜಾರೋಹಣ ಹಿಂದೂ ಸಮುದಾಯದ ಕಲ್ಯಾಣಕ್ಕೆ ಶ್ರೀನಿವಾಸ ಕಲ್ಯಾಣೋತ್ಸವ ಉತ್ತಮ ಮಾದರಿಯಾಗಿದೆ. ಪುತ್ತೂರಿನ ಈ ಮಹತ್ವದ ಕಾರ್ಯಕ್ರಮ ಇತಿಹಾಸ ನಿರ್ಮಾಣ ಮಾಡಲಿದೆ. ಪುತ್ತಿಲ ಪರಿವಾರ ಹಿಂದೂ ಸಮಾಜದ ಸೇವೆಯಲ್ಲಿ ನಿರತರಾಗಿರುವುದು ಶ್ಲಾಘನೀಯ - ಮಾಣಿಲ ಶ್ರೀ

  • 17 Dec 2024 06:40:14 PM

ಪುತ್ತೂರು : ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಪುತ್ತೂರು ಹಾಗೂ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಇದರ ನೇತೃತ್ವದಲ್ಲಿ ಪುತ್ತೂರು ಮಹಾತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ಡಿ.28 ,29 ರಂದು ಜರಗಲಿರುವ ದ್ವಿತೀಯ ವರ್ಷದ ಶ್ರೀನಿವಾಸ ಕಲ್ಯಾಣೋತ್ಸವ ಮತ್ತು ಧರ್ಮಸಂಗಮ ಕಾರ್ಯಕ್ರಮದ ಚಪ್ಪರ ಮೂಹುರ್ತ ಸಮಾರಂಭ ಡಿ.16 ರಂದು ಮಹಾಲಿಂಗೇಶ್ವರ ದೇವಸ್ಥಾನದ ಮುಂಭಾಗದಲ್ಲಿ ನಡೆಯಿತು.

 

ಮಹಾಲಿಂಗೇಶ್ವರ ದೇವಸ್ಥಾನದ ನಡೆಯಲ್ಲಿ ಪ್ರಾರ್ಥನೆಯ ನಂತರ ದೇವಸ್ಥಾನದ ಅರ್ಚಕರಾದ ಜಯರಾಮ್ ಭಟ್ ಅವರು ಚಪ್ಪರ ಮೂಹೂರ್ತದ ಧಾರ್ಮಿಕ ವಿಧಿವಿಧಾನಗಳನ್ನು ನಡೆಸಿಕೊಟ್ಟರು.

 

ಈ ಕಾರ್ಯಕ್ರಮದಲ್ಲಿ ಗೌರವ ಉಪಸ್ಥಿತಿಯಲ್ಲಿದ್ದ ಮಾಣಿಲ ಶ್ರಿಧಾಮದ ಮೋಹನದಾಸ ಸ್ವಾಮಿಜಿ ಪುಷ್ಪಾರ್ಚನೆ ನಡೆಸಿ ಕಾರ್ಯಕ್ರಮದ ಯಶಸ್ವಿಗೆ ಶುಭಹಾರೈಸಿದರು.

 

 ಮೊದಲನೆಯ ವರ್ಷವು ಹಿಂದೂ ಬಂಧುಗಳನ್ನು ಬೃಹತ್ ಸಂಖ್ಯೆಯಲ್ಲಿ ಸೇರಿಸುವ ಮೂಲಕ ಶ್ರೀನಿವಾಸ ಕಲ್ಯಾಣೋತ್ಸವ ಬಹಳ ಯಶಸ್ವಿಯಾಗಿ ನೆರವೇರಿತು. ಇದರ ಕೀರ್ತಿ ಹೆಗ್ಗಳಿಕೆಯೂ ಸಂಘಟಕ ಅರುಣ್ ಕುಮಾರ್ ಹಾಗೂ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ನವರಿಗೆ ಸಲ್ಲುತ್ತದೆ.ಹಾಗೆಯೇ ಈ ವರ್ಷದ ಕಲ್ಯಾಣೋತ್ಸವ ಕಾರ್ಯಕ್ರಮವು ಇತಿಹಾಸ ಸೃಷ್ಟಿಸಲಿದೆ ಎಂದು ಸ್ವಾಮೀಜಿಗಳು ನುಡಿದರು.

 

ಮಹಾಲಿಂಗೇಶ್ವರ ದೇವರ ಮಣ್ಣಿನಲ್ಲಿ ನಡೆಯುವ ವೆಂಕಟರಮಣ ದೇವರ ಸೇವೆಯು ಪುಣ್ಯದ ಜಾತ್ಯವೆಂದೂ ಜಿಲ್ಲೆಯಲ್ಲೇ ಬೃಹತ್ ಕಾರ್ಯಕ್ರಮವಾಗಿ ಈ ವರ್ಷ ನಡೆಯುವುದರಲ್ಲಿ ಸಂಶಯವಿಲ್ಲ ಎಂದು ಹೇಳಿದರು. ಮೂರು ದಿನಗಳ ಕಾಲ ನಡೆಯುವ ಈ ಶ್ರೀನಿವಾಸ ಕಲ್ಯಾಣೋತ್ಸವ ಕಾರ್ಯಕ್ರಮದಲ್ಲಿ ನಾನು ಭಾಗವಹಿಸುತ್ತೇನೆ ಎಂದು ಹೇಳಿದರು.

 

ಧರ್ಮಸಂಗಮ ಕಾರ್ಯಕ್ರಮದ ಮೂಲಕ ಎರಡು ಜಿಲ್ಲೆಯ ಸ್ವಾಮಿಜೀಗಳ ಕೂಡುವಿಕೆ ನಡೆಯಲಿದೆ. ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಸಮಾಜದಲ್ಲಿ ಉದ್ಯೋಗ, ಆರೋಗ್ಯ, ಶೈಕ್ಷಣಿಕ, ಧಾರ್ಮಿಕ ಸೇವೆಯ ಮೂಲಕ ಮನೆಮಾತಾಗಿದೆ. ದಿನದ 24 ಗಂಟೆಯೂ ಹಿಂದೂಗಳ ಸೇವೆಗೆ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಸನ್ನದವಾಗಿರುವುದು ಶ್ಲಾಘನೀಯ ಕಾರ್ಯ ಎಂದು ಸ್ವಾಮಿಜೀ ಹೇಳಿದರು.

 

 

ಪ್ರಾಸ್ತಾವಿಕ ಮಾತನಾಡಿದ ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಸಂಚಾಲಕರಾದ ಅರುಣ್ ಕುಮಾರ್ ಪುತ್ತಿಲ, ಪ್ರಥಮ ವರ್ಷದ ಶ್ರೀನಿವಾಸ ಕಲ್ಯಾಣೋತ್ಸವದ ಸಮಯದಲ್ಲಿ ಮಾಣಿಲ ಶ್ರೀಗಳ ಪರಿಶ್ರಮವನ್ನು ನೆನಪಿಸಿಕೊಂಡರು. ಪ್ರತಿ ಮನೆಯ ಹಿಂದೂಗಳು ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕೃತಾರ್ಥರಾಗಬೇಕು ಎಂದು ವಿನಂತಿಸಿಕೊಂಡರು.

 

 *ಶ್ರೀನಿವಾಸ ಕಲ್ಯಾಣೋತ್ಸವ ನಡೆಯುವ ಮಹಾಲಿಂಗೇಶ್ವರ ದೇವಸ್ಥಾನದ ಎದುರಿನ ಗದ್ದೆಯಲ್ಲಿ 50 ಫೀಟ್ ಎತ್ತರದ ಬೃಹತ್ ಭಗವಧ್ವಜಸ್ಥಂಭ ಹಾರಿಸಲಾಗಿದೆ.* 

 

ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಅಧ್ಯಕ್ಷರಾದ ಶಿವಪ್ರಸಾದ್ ಇಜ್ಜಾವು, ಸ್ವಾಗತ ಸಮಿತಿ ಸಂಚಾಲಕ , ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪ್ರಸನ್ನ ಕುಮಾರ್ ಮಾರ್ತಾ , ಉದ್ಯಮಿ ಜೆ.ಕೆ ನಾಯರ್ , ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಅಧ್ಯಕ್ಷರಾದ ಮಹೇಂದ್ರ ವರ್ಮ ಬಜತ್ತೂರು, ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ಉಮೇಶ್ ಕೋಡಿಬೈಲು, ಸ್ವಾಗತ ಸಮಿತಿ ಸಂಚಾಲಕರಾದ ಅನಿಲ್ ತೆಂಕಿಲ, ಅಧ್ಯಕ್ಷರಾದ ರಾಜು ಶೆಟ್ಟಿ, ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ನ ಗಣೇಶ್ ಮಕರಂದ, ಪ್ರಚಾರ ಸಮಿತಿ ಸಂಚಾಲಕ ನವೀನ್ ರೈ ಪಂಜಳ, ವಕೀಲರಾದ ಚಿನ್ಮಯ್ ರೈ ಈಶ್ವರಮಂಗಲ, ಬಾಲಚಂದ್ರ ಸೊರಕೆ, ಗಿರೀಶ್ ಕುಮಾರ್, ಸುನೀಲ್ ಬೊರ್ಕರ್, ಸುಜಿತ್ ಕಜೆ, ಪ್ರಜ್ವಲ್ ಘಾಟೆ, ಪ್ರವೀಣ್ ನಾಯ್ಕ್ ಪಾಂಗಾಳಾಯಿ, ಮನೀಶ್ ಕುಲಾಲ್, ನಿತೀಶ್ ರೈ ತಿಂಗಳಾಡಿ, ಗಣೇಶ್ ಬೆದ್ರಾಳ ಸಹಿತ ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಪುತ್ತೂರು ಹಾಗೂ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ನ ಪದಾಧಿಕಾರಿಗಳು , ಹಿಂದೂ ಸಂಘಟನೆಯ ಪ್ರಮುಖರು ಹಾಗೂ ಪಕ್ಷದ ಮುಖಂಡರು ಸೇರಿದಂತೆ ನೂರಾರು ಕಾರ್ಯಕರ್ತರು ಕಾರ್ಯಲಯ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡರು.

 

ಸಮಿತಿಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ರೈ ಕೆದಂಬಾಡಿಮಠ ಸ್ವಾಗತಿಸಿ ಕಾರ್ಯಕ್ರಮವನ್ನು ನಿರೂಪಿಸಿದರು.