15ನೇ ವರ್ಷದ ಸಾರ್ವಜನಿಕ ಶ್ರೀ ಶನೈಶ್ಚರ ಪೂಜೆ ಮತ್ತು ಶಬರಿಮಲೆ ಯಾತ್ರಾ ಕಾರ್ಯಕ್ರಮ

  • 18 Dec 2024 09:14:39 AM

ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಕೆಂಪುಗುಡ್ಡೆ, ಅಮ್ಮಾಡಿಯ ಶ್ರೀ ಶನೈಶ್ವರ ಕಟ್ಟೆ ಮಂಟಪದಲ್ಲಿ ಮಣಿಕಂಠ ಸೇವಾ ಸಮಿತಿಯ ನೇತೃತ್ವದಲ್ಲಿ ನಡೆಯುವ 15ನೇ ವರ್ಷದ ಸಾರ್ವಜನಿಕ ಶ್ರೀ ಶನೈಶ್ಚರ ಪೂಜೆಯು 21-12-2024 ಶನಿವಾರದಂದು ಸಂಜೆ 3:30ಕ್ಕೆ ನಡೆಯಲಿದೆ. 

 

ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ ರಾತ್ರಿ 9:00 ಗಂಟೆಯಿಂದ ಸಸಿಹತ್ತು ಶ್ರೀ ಭಗವತೀ ದಶಾವತಾರ ಯಕ್ಷಗಾನ ಮಂಡಳಿಯವರಿಂದ _ಕಲ್ಜಿಗದ ಸತ್ಯ_ ಯಕ್ಷಗಾನ ಪ್ರದರ್ಶನ ನಡೆಯಲಿದೆ. 

 

ವಸಂತ ಬಂಟ್ವಾಳ ರಚಿತ ಮತ್ತು ಮಾಧವ ಭಂಡಾರಿ ಕುಳಾಯಿ ಅವರ ಪದ್ಯ ರಚನೆಯ ಈ ತುಳು ಪ್ರಸಂಗವು ಹಾಸ್ಯಭರಿತ ಕೌತುಕದೊಂದಿಗೆ ಪ್ರೇಕ್ಷಕರ ಮನರಂಜನೆಗಾಗಿ ಸಿದ್ಧವಾಗಿದೆ.

 

ಇದೇ ಸಂದರ್ಭದಲ್ಲಿ 09-01-2025, ಗುರುವಾರದಂದು ಶ್ರೀ ಅಯ್ಯಪ್ಪ ಮಾಲಾಧಾರಿಗಳ ಶಬರಿಮಲೆ ಯಾತ್ರಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. 

 

 ಬೆಳಿಗ್ಗೆ 8:00 ಗಂಟೆಯಿಂದ ಇರುಮುಡಿ ಕಟ್ಟುವ ಪ್ರಕ್ರಿಯೆ ಪ್ರಾರಂಭವಾಗಲಿದೆ. ಮಧ್ಯಾಹ್ನ 12:00ಕ್ಕೆ ಅನ್ನದಾನ ನಡೆಯಲಿದೆ. 

 

ಈ ದಿವ್ಯ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ತಾವು ಸಕ್ರಿಯವಾಗಿ ಭಾಗವಹಿಸಿ, ಶ್ರೀ ಶನೈಶ್ವರ ಮತ್ತು ಅಯ್ಯಪ್ಪ ಸ್ವಾಮಿಯ ಕೃಪೆಗೆ ಪಾತ್ರರಾಗಬೇಕೆಂದು ಮಣಿಕಂಠ ಸೇವಾ ಸಮಿತಿಯು ಭಕ್ತಾದಿಗಳನ್ನು ವಿನಂತಿಸುತ್ತಿದ್ದರೆ.