ನಾವುರು: ನಾವೂರು ಗ್ರಾಮದ ಮಾತೃಭೂಮಿ ಸೇವಾ ಸಂಘವು ಒಂದು ವರ್ಷ ಪೂರೈಸಿದ ಸಂಭ್ರಮದ ಸುಸಂದರ್ಭದಲ್ಲಿ, ಸಂಘದ ಮುಂದಾಳತ್ವದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ, ಯೋಧ ನಮನ ಹಾಗೂ ಚಿಣ್ಣರ ಚಿತ್ತಾರ ಕಾರ್ಯಕ್ರಮಗಳು ವಿಜೃಂಭಣೆಯಿಂದ ಜರಗಿತು.
ಖ್ಯಾತ ಉದ್ಯಮಿ ಹಾಗೂ ಸಮಾಜಸೇವಕರಾದ ಡಾ. ರವಿ ಕಕ್ಕೆಪದವು ಅವರು ಮುಖ್ಯ ಉದ್ಘಾಟಕರಾಗಿ ಪಾಲ್ಗೊಂಡು, _ನಾವು ಸಮಾಜಮುಖಿಯಾದಾಗ ಮನಸ್ಸಿಗೆ ಒಂದು ರೀತಿಯ ನೆಮ್ಮದಿ ದೊರಕುತ್ತದೆ_, ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಕಾರ್ಯಕ್ರಮಕ್ಕೆ ಶುಭ ಹಾರೈಸಿ ಪ್ರೇರಣಾದಾಯಕ ಮಾತುಗಳನ್ನಾಡಿದರು. ಪ್ರಖ್ಯಾತ ಸಾಹಿತಿ ಹಾಗೂ ಉಪನ್ಯಾಸಕರಾದ ರಘ ಇಡ್ಕಿದು ಅವರು _ಸಮಾಜದ ಅಭಿವೃದ್ಧಿಗೆ ಸಮಾಜಮುಖಿ ಸಂಘಟನೆಗಳ ಜೊತೆ ತೊಡಗಿಸಿಕೊಂಡಾಗ ಮತ್ತಷ್ಟು ಪರಿಣಾಮಕಾರಿ ಸಾಧನೆಗಳು ಸಾಧ್ಯ_ ಎಂಬುದಾಗಿ ಅಭಿಪ್ರಾಯಪಟ್ಟರು.
ಅಂತರಿಕ ಭದ್ರತಾ ವಿಭಾಗದ ಸಹಾಯಕ ಉಪನಿರೀಕ್ಷಕರಾದ ಶ್ರೀ ಗೋಪಾಲಕೃಷ್ಣ ಕುಂದರ್ ಅವರು, _ಪೋಷಕರ ವರ್ತನೆ ಕೂಡ ಮಕ್ಕಳ ಬೆಳವಣಿಗೆ ಮೇಲೆ ನೇರ ಪರಿಣಾಮ ಬೀರುತ್ತದೆ_ ಎಂದು ಹೇಳಿದರು.
ಶ್ರೀ ಕ್ಷೇತ್ರ ಕಾರಿಂಜದ ವ್ಯವಸ್ಥಾಪನಾ ಸಮಿತಿಯ ನಿಕಟ ಪೂರ್ವ ಅಧ್ಯಕ್ಷರಾದ ಶ್ರೀ ಚಂದ್ರಶೇಖರ ಶೆಟ್ಟಿ ಪುಲಿಮಜಲು ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದರು.
ಪ್ರತಿಷ್ಠಿತ ಅತಿಥಿಗಳಾದ ಮಾಜಿ ಸೈನಿಕರ ಸಂಘದ ಗೌರವ ಅಧ್ಯಕ್ಷ ಕ್ಯಾಪ್ಟನ್ ದಾಸಪ್ಪ ಪೂಜಾರಿ, ನಾವೂರು ಗ್ರಾಮಪಂಚಾಯತ್ ಅಧ್ಯಕ್ಷೆ ಶ್ರೀಮತಿ ಇಂದಿರಾ, ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಶ್ರೀ ಜಯರಾಮ್, ಉದ್ಯಮಿ ಸುಂದರ ಕುಲಾಲ್ (ಕಲ್ಪವೃಕ್ಷ), ಕ್ಷೇತ್ರ ಸಂಪನ್ಮೂಲ ಅಧಿಕಾರಿ ಶ್ರೀಮತಿ ನಾಗರತ್ನ, ಮತ್ತು ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಸಂತೋಷ್ ಕೋಟ್ಯಾನ್ ಎಕ್ಕು ಡೇಲು, ಶಾಲಾ ಅಭಿವೃದ್ಧಿ ಸಮಿತಿಯ ಮಾಜಿ ಅಧ್ಯಕ್ಷರಾದ ಸತೀಶ್ ಮಲಿಕೋಡಿ, ಹಾಲಿ ಅಧ್ಯಕ್ಷರಾದ ಪ್ರವೀಣ್ ನವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು
ಮಾತೃಭೂಮಿ ಸಂಘವು 12 ಮಂದಿಯನ್ನು ಮಾಜಿ ಸೈನಿಕರನ್ನು, ಅವರಲ್ಲೊಂದು ಪೋಲಿಸ್ ಅಧಿಕಾರಿಯನ್ನು, ಮತ್ತು ಮಾತೃಭೂಮಿ ಸಂಘಕ್ಕೆ ಸಹಕಾರ ನೀಡಿದ ಎಲ್ಲ ಸಮಾಜಮುಖಿ ಚಿಂತಕರನ್ನು ಗೌರವಿಸಿ ಕೃತಜ್ಞತೆ ಸಲ್ಲಿಸಿತು.
ಕಾರ್ಯಕ್ರಮದ ಭಾಗವಾಗಿ, ತುಳುನಾಡ ಪೊರ್ಲು ಎಂಬ ವಿಶಿಷ್ಟ ಪ್ರದರ್ಶನವನ್ನು ಶಾಲಾ ವಿದ್ಯಾರ್ಥಿಗಳು ಸಲ್ಲಿಸಿದರು. ಬಂಟ್ವಾಳದ ಸ್ಪಂದನ ಕಲಾವಿದರು "ಹಾಸ್ಯ ಗಾನ ಸಂಭ್ರಮ" ಕಾರ್ಯಕ್ರಮದಿಂದ ನಗುವು ತರಿಸಿದರು.
ಸಂಘದ ನಿರ್ದೇಶಕರಾದ ಸುರೇಶ್ ಎಸ್. ನಾವೂರು ಪ್ರಸ್ತಾವಿಕದೊಂದಿಗೆ ಸಭೆ ಆರಂಭಿಸಿ, ಪ್ರಭಾರ ಮುಖ್ಯೋಪಾಧ್ಯಾಯರಾದ ಶ್ರೀಮತಿ ಪ್ರಸಿಲ್ಲಾ ಡಿಸೋಜ ಶಾಲಾ ವರದಿಯನ್ನು ವಾಚಿಸಿದರು.
ಹಳೆ ವಿದ್ಯಾರ್ಥಿಗಳು ಪ್ರಾರ್ಥಿಸಿ, ಶಿಕ್ಷಕ ಸಾಹಿತಿ ಎಂಕೆ ಕನ್ಯಾಡಿ ಅವರು ಕಾರ್ಯಕ್ರಮದ ಕಾರ್ಯಕ್ರಮ ನಿರೂಪಿಸಿದರು.