ಕಾಪು ಶ್ರೀ ಹೊಸ ಮಾರಿಗುಡಿ ಪುನರ್ ಪ್ರತಿಷ್ಠೆಎ ಅಂಗವಾಗಿ ನವದುರ್ಗಾ ಲೇಖನ ಯಜ್ಞ: ಡಾ. ಹೆಚ್.ಎಸ್. ಬಲ್ಲಾಳ್ ಅವರನ್ನು ಭೇಟಿ ಮಾಡಿದ ಕೆ. ರಘುಪತಿ ಭಟ್

  • 18 Dec 2024 03:47:02 PM

ಕಾಪು : ಸಂಪೂರ್ಣ ಶಿಲಾಮಯವಾಗಿ ಜೀರ್ಣೋದ್ಧಾರಗೊಳ್ಳುತ್ತಿರುವ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ಪುನರ್ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವದ ಅಂಗವಾಗಿ ನವದುರ್ಗಾ ಲೇಖನ ಯಜ್ಞ ಆಯೋಜಿಲಾಗಿದೆ.

 

ಈ ಲೇಖನ ಬರೆಯುವ ಕಾರ್ಯಕ್ರಮವನ್ನು ಯಶಸ್ವಿಗೊಳ್ಳಿಸುವ ನಿಟ್ಟಿನಲ್ಲಿ ದಿನಾಂಕ 18-12-2024 ರಂದು ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ (ಮಾಹೆ) ಇದರ ಕುಲಪತಿಗಳಾದ ಡಾ.ಹೆಚ್.ಎಸ್.ಬಲ್ಲಾಳ್ ಅವರನ್ನು ಉಡುಪಿಯ ನಿಕಟಪೂರ್ವ ಶಾಸಕರು ಮತ್ತು ನವದುರ್ಗಾ ಲೇಖನ ಯಜ್ಞ ಸಮಿತಿ ಅಧ್ಯಕ್ಷರಾದ ಕೆ ರಘುಪತಿ ಭಟ್ ಅವರು ಭೇಟಿ ಮಾಡಿ ನವದುರ್ಗಾ ಲೇಖನ ಯಜ್ಞದ ಕುರಿತು ಸಂಪೂರ್ಣ ವಿವರಣೆ ನೀಡಿದರು. ಹಾಗೆಯೇ ಈ ಯಜ್ಞದಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು .

 

ನವದುರ್ಗಾ ಲೇಖನ ಯಜ್ಞ ಸಮಿತಿ ಕಾರ್ಯಧ್ಯಕ್ಷರಾದ ಮುನಿಯಾಲು ಉದಯ್ ಕುಮಾರ್ ಶೆಟ್ಟಿ ಮತ್ತು ಪ್ರಧಾನ ಕಾರ್ಯದರ್ಶಿ ಯೋಗಿಶ್ ಶೆಟ್ಟಿ ಅವರು ಉಪಸ್ಥಿತರಿದ್ದರು.