ಸರಪಾಡಿ: ಸರಪಾಡಿಯ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಸರಪಾಡಿ ಅಶೋಕ್ ಶೆಟ್ಟಿ ಯವರ ಯಕ್ಷ ಪಯಣದ 50ರ ಸಂಭ್ರಮದ ಸುವರ್ಣ ಸರಪಾಡಿ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭವು ಅದ್ಧೂರಿಯಾಗಿ ನಡೆಯಿತು.
ಈ ಕಾರ್ಯಕ್ರಮದ ಅಂಗವಾಗಿ ಶ್ರೀ ಕ್ಷೇತ್ರದ ಧರ್ಮದರ್ಶಿಗಳಾದ ಶ್ರೀ ದೇಜಪ್ಪ ಬಾಚಕೆರೆ ಮತ್ತು ಸಂಜೀವ ಪೂಜಾರಿ ಗುರುಕೃಪ ಅವರು ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿದರು.
ಈ ಸಮಯದಲ್ಲಿ ಅರ್ಚಕರಾದ ಪ್ರಸಾದ್ ಐತಳ್ ಅರಮನೆ ಸರಪಾಡಿ, ದಯಾನಂದ ಐತಳ್, ಸಂಪತ್ ಕುಮಾರ್ ಶೆಟ್ಟಿ ಮುಂಡ್ರೇಲ್ ಗುತ್ತು, ಶಶಿಕಾಂತ್ ಶೆಟ್ಟಿ ಆರುಮುಡಿ, ಸಂತೋಷ್ ಸರಪಾಡಿ, ಅಭಿಷೇಕ್ ಸುವರ್ಣ ತಿಂಗಳಾಡಿ ಕುದುರು ಮತ್ತು ಇನ್ನಿತರ ಪ್ರಮುಖರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಯಕ್ಷಗಾನದ ಪರಂಪರೆ ಮತ್ತು ಕಲೆಗೆ ವಿಶೇಷ ಪ್ರೋತ್ಸಾಹವನ್ನು ನೀಡುವ ಉದ್ದೇಶದಿಂದ ಈ ಕಾರ್ಯಕ್ರಮದ ಆಯೋಜನೆಯಾಗಿದ್ದು, 50ರ ಸಂಭ್ರಮವನ್ನು ಯಶಸ್ವಿಯಾಗಿ ಆಚರಿಸಲು ನಿರ್ಧರಿಸಿದೆ.