ವಿದ್ಯಾನಿಕೇತನ ಶಾಲಾ ಪರಿಸರದಲ್ಲಿ ಉಚಿತ ವೈದ್ಯಕೀಯ ಶಿಬಿರ ಹಾಗೂ ರಕ್ತದಾನ ಶಿಬಿರ - ಕುಳಾಲ ವೇದಿಕೆ ಮಂಜೇಶ್ವರ

  • 04 Nov 2024 06:05:45 PM

ಮಂಜೇಶ್ವರ - ಕುಲಾಲ ವೇದಿಕೆ ಮಂಜೇಶ್ವರ ಇದರ ನೇತೃತ್ವದಲ್ಲಿ ಲಯನ್ಸ್  ಕ್ಲಬ್ ಕದ್ರಿ ಹಿಲ್ಸ್, ಮಂಗಳೂರು ಇದರ ಸಹಭಾಗಿತ್ವದಲ್ಲಿ ಶಾರದಾ ಆಯುರ್ವೇದ ಆಸ್ಪತ್ರೆ ದೇವಿ ನಗರ, ತಲಪಾಡಿ ಹಾಗೂ ಜಿಲ್ಲಾ ಆಸ್ಪತ್ರೆ ಮಂಗಳೂರು ಇವರ ಜಂಟಿ ಸಹಯೋಗದಲ್ಲಿ ಉಚಿತ ವೈದ್ಯಕೀಯ ಶಿಬಿರ ಹಾಗೂ ರಕ್ತದಾನ ಶಿಬಿರ ಇಲ್ಲಿನ ಸ್ಪೂರ್ತಿ ವಿದ್ಯಾನಿಕೇತನ ಶಾಲಾ ಪರಿಸರದಲ್ಲಿಜರಗಿತು.

ಸಮಾರಂಭದ ಅಧ್ಯಕ್ಷತೆಯನ್ನು ಕುಲಾಲ ವೇದಿಕೆ ಮಂಜೇಶ್ವರ ಇದರ ಸಂಚಾಲಕರಾದ ಕಿಶನ್ ಕುಮಾರ್ ಕಣ್ವ ತೀರ್ಥ ವಹಿಸಿದ್ದರು.ಬಡಾಜೆ ಬೂಡು ಬ್ರಹ್ಮಶ್ರೀ  ಗೋಪಾಲ ಕೃಷ್ಣ ತಂತ್ರಿ ಹಾಗೂ ಉದ್ಯಾವರ ಮಾಡ ಅಣ್ಣದೈವದ  ಪಾತ್ರಿ   ರಾಜ ಬೆಳ್ಚಾಡರು ಜಂಟಿಯಾಗಿ ದೀಪ ಪ್ರಜ್ವಲನಗೈದು
ಕಾರ್ಯಕ್ರಮವನ್ನು ಔಪಚಾರಿಕವಾಗಿ ಉದ್ಘಾಟಿಸಿದರು.


ಸಮಾರಂಭದಲ್ಲಿ ಉಪಸ್ಥಿತರಿದ್ದ
ಮಂಜೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷೆ ಜೀನ್ ಲವೀನ   ಮೊಂತೇರೋ,  ಕೇರಳ ಹೈಕೋರ್ಟು ಅಸಿಸ್ಟೆಂಟ್ ರಿಜಿಸ್ಟ್ರಾರ  ದಿನೇಶ್ ಕೊಡಂಗೆ, ಲಯನ್ಸ್ ಕ್ಲಬ್ ಕದ್ರಿ ಹಿಲ್ಸ್ ಮಂಗಳೂರು ಇದರ ಕೆ ವಿ ಪ್ರಕಾಶ್ ಶಾರದಾ ಆಯುರ್ವೇದ ಆಸ್ಪತ್ರೆ ಜೆ ವಿ ನಗರ ತಲಪಾಡಿಯ ವೈದ್ಯರಾದ ಡಾ. ಸಂದೀಪ್ ಬೇಕಲ್ ಶುಭ ಹಾರೈಸಿ ಮಾತನಾಡಿದರು


ಇದೇ ಸಂದರ್ಭದಲ್ಲಿ ಮಂಜೇಶ್ವರ ಗ್ರಾಮ ಪಂಚಾಯತ್ ಕ್ಷೇಮಾಭಿವೃದ್ಧಿ ಸ್ಥಾಯಿ ಸಮಿತಿ ಚೇರ್ಮೆನ್ ಯಾದವ್ ಬಡಾಜೆ ವರ್ಕಾಡಿ ಗ್ರಾಮಾಧಿಕಾರಿ ಸ್ವಪ್ನ ಗಣೇಶ್, ಅಡ್ಕ ಕುಂಜತ್ತೂರು ನಾಗಮೂಲಸ್ಥಾನದ ಮುಖ್ಯ ಕರ್ಮಿ ಹರೀಶ್ ಮೂಲ್ಯಣ್ಣ, ಬಡಾಜೆ ಸ್ಪೂರ್ತಿ ವಿದ್ಯಾನಿಕೇತನ ಶಾಲೆಯ ಪ್ರಬಂಧಕರಾದ  ಮಧುಸೂದನ ಬಳ್ಳಕುರಾಯ,ಹಿಂದೂ ಯುವ ಸೇನೆ ರಕ್ತನಿಧಿ ಮಂಗಳೂರು ಇದರ ಸಂಚಾಲಕರಾದ ನಿಶಾಂತ್ ಜಪ್ಪಿನಮೊಗರು ವೆನ್ಲಾಕ್ ಆಸ್ಪತ್ರೆ ಮಂಗಳೂರು ಇದರ ಅ್ಯಂಟನಿ ಡಿಸೋಜ, ಬಡಾಜೆ ಶಿವಪುರ ವೀರ ಮಾರುತಿ ವ್ಯಾಯಾಮ ಶಾಲೆಯ ಅಧ್ಯಕ್ಷರಾದ ರಾಮಚಂದ್ರ ಸುರಿಬೈಲು  ಯುವಕ ಸಂಘ(ರಿ.)  ಬಡಾಜೆ ಇದರ ಅಧ್ಯಕ್ಷರಾದ ಉಮೇಶ್ ಕಲ್ಲಗದ್ದೆ, ಆಂಜನೇಯ ಫ್ರೆಂಡ್ಸ್ ಕ್ಲಬ್ (ರಿ.)ಕಣ್ವತೀರ್ಥ ಇದರ ಗೌರವಾಧ್ಯಕ್ಷರಾದ  ಗಣೇಶ್ ತೂಮಿನಾಡು  ಪ್ರತಾಪ್ ಫ್ರೆಂಡ್ಸ್ ಹೊಸಬೆಟ್ಟು ಇದರ ಅಧ್ಯಕ್ಷರಾದ ನವೀನ್ ಅಡಪ, ವೀರ ಕೇಸರಿ ಫ್ರೆಂಡ್ಸ್(ರಿ.)  ಹೊಸಂಗಡಿ ಇದರ ಅಧ್ಯಕ್ಷರಾದ ಪವನ್ ಕುಮಾರ್ ಹೊಸಂಗಡಿ ಉಪಸ್ಥಿತರಿದ್ದರು.ಬಾಲಗೋಕುಲ ವಿದ್ಯಾರ್ಥಿನಿಯರು ಪ್ರಾರ್ಥನೆ ಹಾಡಿದರು.ಈಶ್ವರ ಮಾಸ್ತರ್ ಸ್ವಾಗತಿಸಿದರು ಕಿಶನ್ ಕುಮಾರ್ ಕಣ್ವತೀರ್ಥ ವಂದಿಸಿದರು. ಶೈಲೇಶ್ ಸ್ಫೂರ್ತಿನಗರ ಕಾರ್ಯಕ್ರಮವನ್ನು
ನಿರೂಪಿಸಿದರು.