ಪ್ರತಾಪನಗರ: ಬಿಜೆಪಿ ಕುಂಬಳೆ ಮಂಡಲ ಕಾರ್ಯದರ್ಶಿ ಹಾಗೂ ಜೈ ಹನುಮಾನ್ ಫ್ರೆಂಡ್ಸ್ ಕ್ಲಬ್ ಪ್ರತಾಪನಗರದ ಗೌರವಾಧ್ಯಕ್ಷರಾದ ಸ್ವರ್ಗೀಯ ಧನ್‌ರಾಜ್ ಪ್ರತಾಪನಗರ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲು ಸಮಾರಂಭವನ್ನು ಪ್ರತಾಪ್ ನಗರ ಸೋಂಕಲ್ ಜಂಕ್ಷನ್ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದಲ್ಲಿ ಕೇರಳ ರಾಜ್ಯ ಬಿಜೆಪಿ ಅಧ್ಯಕ್ಷರಾದ ಕೆ. ಸುರೆಂದ್ರನ್ ಅವರು ಧನ್‌ರಾಜ್ ಅವರ ಪಕ್ಷದ ಚಟುವಟಿಕೆಗಳ ಕುರಿತು ಮತ್ತು ಅವರು ಸಮುದಾಯಕ್ಕಾಗಿ ಮಾಡಿದ ಕಾರ್ಯ,ಕೊಡುಗೆಗಳ ಬಗ್ಗೆ ವಿವರಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷರಾದ ರವೀಶ ತಂತ್ರಿ ಕುಂಟಾರು, ಕೇರಳ ರಾಜ್ಯ ಸಮಿತಿ ಕಾರ್ಯದರ್ಶಿ ಅಡ್ವ ಕೆ ಶ್ರೀಕಾಂತ್ ಅವರಂತೆ ಹಲವಾರು ಪ್ರಮುಖ ನಾಯಕರು ಧನ್‌ರಾಜ್ ಅವರ ಅಗಲುವಿಕೆಗೆ ನುಡಿನಮನವನ್ನು ಸಲ್ಲಿಸಿದರು.
ಕಾರ್ಯಕ್ರಮದಲ್ಲಿ, ಜೈ ಹನುಮಾನ್ ಫ್ರೆಂಡ್ಸ್ ಸಂಸ್ಥೆಯ ಅಧ್ಯಕ್ಷ ಸುರೇಶ್ ಜಿ. ಮತ್ತು ನಾರಾಯಣ ಬೆಹರಿನ್ ಸೇರಿದಂತೆ ಹಲವರು ಪ್ರಮುಖರು ಉಪಸ್ಥಿತರಿದ್ದರು.
ಬಿಜೆಪಿ ಕುಂಬಳೆ ಮಂಡಲ ಪ್ರಧಾನ ಕಾರ್ಯದರ್ಶಿ ವಸಂತ್ ಕುಮಾರ್ ಮಯ್ಯ ಅವರು ಸ್ವಾಗತಿಸಿ, ಅವಿನಾಶ್ ಯಂ ಪ್ರಾಸ್ತಾವಿಕ ಭಾಷಣವನ್ನು ಮಾಡಿದರು.
ಸಭೆಯಲ್ಲಿ, ಧನ್‌ರಾಜ್ ಅವರ ಶ್ರದ್ಧಾಂಜಲಿಗೆ ಕಾರ್ಯಕರ್ತರು, ಹಿರಿಯರು ಹಾಗೂ ಅನೇಕರು ಪುಷ್ಪಾರ್ಚನೆ ಸಲ್ಲಿಸಿದರು.