ಜೋಡುಕಲ್ಲು: ಮಾಜಿ ಪ್ರಧಾನ ಮಂತ್ರಿ ಹಾಗೂ ಭಾರತೀಯ ಜನತಾ ಪಕ್ಷದ ಮೊದಲ ಅಧ್ಯಕ್ಷರಾದ ದಿ||ಅಟಲ್ ಬಿಹಾರಿ ವಾಜಪೇಯಿಯವರ 100ನೇ ಜನ್ಮದಿನಾಚರಣೆಯನ್ನು ಇಂದು ಬೆಳಿಗ್ಗೆ 8.00 ಗಂಟೆಗೆ ಜೋಡುಕಲ್ಲಿನ 114ನೇ ಬೂತ್ ಕಾರ್ಯಕರ್ತರೊಂದಿಗೆ ಆಚರಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಸಮಿತಿ ಸದಸ್ಯ ಪ್ರಸಾದ್ ರೈ ಕೈಯಾರು ಅವರು ಧ್ವಜಾರೋಹಣ ಕಾರ್ಯಕ್ರಮವನ್ನು ನೆರವೇರಿಸಿದರು.
ಪೈವಳಿಕೆ ಪಂಚಾಯತ್ ಅಧ್ಯಕ್ಷ ಶ್ರೀ ಲೋಕೇಶ್ ನೋಂಡ ಜೋಡುಕಲ್ಲು ಅವರು ಪುಷ್ಪಾರ್ಚನೆಯ ಮೂಲಕ ಗೌರವ ನಮನಗಳನ್ನು ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಬೂತ್ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಪಟ್ಲ, ಸನತ್ ಕುಮಾರ್ ರೈ, ಸದಾಶಿವ ಶೆಟ್ಟಿ ಮಂಜಲ್ತೋ, ಡಿ. ಕಿರಣ್ ಕೆಪಿ ಪಟ್ಲ, ಪ್ರಶಾಂತ್ ಪಚ್ಚು ಪಟ್ಲ, ಗಿರೀಶ್ ಇದ್ದಂಗೋಡಿ, ಚಂದ್ರಶೇಖರ ಪಂಜಿಪಳ್ಳ, ಹರೀಶ್ ಇದ್ದಂಗೋಡಿ, ಕೋಟಿ ಅರಿಯಾಳ, ದಿತೇಶ್ ಪಟ್ಲ ಹಾಗೂ ಅನೇಕ ಕಾರ್ಯಕರ್ತರು ಪಾಲ್ಗೊಂಡರು.