ವೈವಳಿಕೆ: ಪೈವಳಿಕೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಮತ್ತು ಮಾರ್ಕ್ಸಿಸ್ಟ್ ಪಕ್ಷದ ನಾಯಕರಾದ ಕೃಷ್ಣ ನಾಯ್ಕ್ ಅವರ ಪುತ್ರ ಗಣೇಶ್ ಪ್ರಸಾದ್ ಚೇರಲ್ ಅವರು ಬಿಜೆಪಿ ಪಕ್ಷವನ್ನು ಸೇರಿದ್ದಾರೆ.
ಈ ವಿಶೇಷ ಕಾರ್ಯಕ್ರಮದಲ್ಲಿ ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷರಾದ ಅಬ್ದುಲ್ಲ ಕುಟ್ಟಿ, ಆದರ್ಶ ಬಿ.ಎಂ., ಸದಾಶಿವ ಚೇರಲ್, ಮಣಿಕಂಠ ರೈ ಎ.ಕೆ. ಕಯ್ಯರ್, ಪ್ರಸಾದ್ ರೈ, ಯತಿರಾಜ್ ಶೆಟ್ಟಿ, ಲೋಕೇಶ್ ನೋಂಡ ಮತ್ತು ಇನ್ನಿತರ ಪ್ರಮುಖರು ಉಪಸ್ಥಿತಿರಿದ್ದರು.
ಗಣೇಶ್ ಪ್ರಸಾದ್ ಬಿಜೆಪಿ ಪ್ರಾಥಮಿಕ ಸದಸ್ಯತ್ವವನ್ನು ಸ್ವೀಕರಿಸಿ ತಮ್ಮದೇ ಆದ ಬದ್ಧತೆಯೊಂದಿಗೆ ಪಕ್ಷದ ಬೆಳವಣಿಗೆಯತ್ತ ಗಮನ ಹರಿಸುತ್ತೇನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ, ಪಕ್ಷದ ಆಶಯಗಳನ್ನು ಬಿಂಬಿಸುವಂತೆ ನಾಯಕರು ಭಾಷಣಗಳನ್ನು ನೀಡಿದರು.