ಸುವರ್ಣ ನಾಡು: ಸಕಲ ಇಷ್ಟಾರ್ಥ ಸಿದ್ಧಿ ಮತ್ತು ಲೋಕಕಲ್ಯಾಣಕ್ಕಾಗಿ ಹಿಂದು ಜಾಗರಣ ವೇದಿಕೆ ಸುವರ್ಣನಾಡು ಇದರ ವತಿಯಿಂದ 6ನೇ ವರ್ಷದ ಪಾದಯಾತ್ರೆ ಮಹೋತ್ಸವವು ಇಂದು ಬೆಳಿಗ್ಗೆ 4:00 ಗಂಟೆಗೆ ಶ್ರೀ ದುರ್ಗಾಂಬಿಕ ಸಿದ್ಧೇಶ್ವರಿ ಸಾನಿಧ್ಯದಿಂದ ಪ್ರಾರಂಭಗೊಂಡು ಶ್ರೀ ಕ್ಷೇತ್ರ ಪೊಳಲಿ ರಾಜರಾಜೇಶ್ವರಿ ದೇವಸ್ಥಾನದವರೆಗೆ ಕಾಲ್ನಡಿಗೆ ಯಾತ್ರೆ ನಡೆಯಿತು.
ಪಾದಯಾತ್ರೆಗೆ ನವೀನ್ ಶೆಟ್ಟಿಗಾರ್ ಮತ್ತು ಸಂತೋಷ್ ನಿಲಯದ ಕೃಷ್ಣಪ್ಪ ಪೂಜಾರಿಯವರು ದೀಪ ಬೆಳಗಿಸಿ ಚಾಲನೆ ನೀಡಿದರು. ಬಳಿಕ, ದೇವಿಗೆ ಮಹಾಪೂಜೆ ನೆರವೇರಿಸಲಾಯಿತು.
ಪಾದಯಾತ್ರೆಯ ನಂತರ ನಡೆದ ಧರ್ಮ ಜಾಗೃತಿ ಸಭೆಯಲ್ಲಿ ಅಕ್ಷಯ್ ರಜಪೂತ್ ಕಲ್ಲಡ್ಕ ಬೌಧಿಕ್ ನೀಡಿದರು. ಕಾರ್ಯಕ್ರಮದಲ್ಲಿ ಜಗದೀಶ್ ನೆತ್ತರ್ ಕೆರೆ, ಯೋಗೀಶ್ ತುಂಬೆ, ತಿರುಲೇಶ್ ಬೆಳ್ಳೂರು, ನವೀನ್ ನಿರಲ್ಕೆ ಕೊಪ್ಪಳ, ಶಿವು ಧನುಪೂಜೆ ಸೇರಿದಂತೆ ಹಲವಾರು ಹಿಂದು ಬಾಂಧವರು ಉಪಸ್ಥಿತರಿದ್ದರು.
ಯಶಸ್ವಿನಿ ಸುವರ್ಣನಾಡು ಕಾರ್ಯಕ್ರಮಕ್ಕೆ ಸ್ವಾಗತ ನೀಡಿದ್ದು, ಅಕ್ಷಿತ್ ಕೂರ್ಯಾಳ ವಂದನೆ ಸಲ್ಲಿಸಿದರು.