ಮಂಗಳೂರು: ವೀರ್ ಬಾಲ್ ದಿವಸ್ ಇದರ ಅಂಗವಾಗಿ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಪಾಲಿಕೆ ಸದಸ್ಯ ಕಿರಣ್ ಕುಮಾರ್ ಅವರ ಜೊತೆ ಕೂಳೂರು ಗುರುದ್ವಾರಕ್ಕೆ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಅವರು ಹತ್ತನೇ ಸಿಖ್ ಗುರು ಗೋಬಿಂದ್ ಸಿಂಗ್ ಅವರ ಕಿರಿಯ ಪುತ್ರರಾದ ಸಾಹಿಬ್ಜಾದಾ ಬಾಬಾ ಜೋರಾವರ್ ಸಿಂಗ್ ಮತ್ತು ಬಾಬಾ ಫತೇ ಸಿಂಗ್ ಅವರ ಅಪ್ರತಿಮ ತ್ಯಾಗಕ್ಕೆ ಗೌರವ ನಮನವನ್ನು ಸಲ್ಲಿಸಿದರು.
ಬಳಿಕ ಮಾತನಾಡಿದ ಸಂಸದ ಚೌಟ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಡಿಸೆಂಬರ್ 26 ಅನ್ನು ವೀರ್ ಬಾಲ್ ದಿವಸ್ ಎಂದು ಘೋಷನೆ ಮಾಡಿರುವುದು ನಮ್ಮ ನಾಡಿನ ಸಾಂಸ್ಕೃತಿಕ ಮತ್ತು ಧಾರ್ಮಿಕ ಪರಂಪರೆಯನ್ನು ಮತ್ತಷ್ಟು ಉಜ್ವಲಗೊಳಿಸಿದೆ ಎಂದೂ ಸಿಖ್ ಧರ್ಮದ ಪವಿತ್ರ ಗುರುಗಳ ಮಕ್ಕಳ ತ್ಯಾಗ ಮತ್ತು ಧೈರ್ಯ ಭಾರತದ ಇತಿಹಾಸದಲ್ಲಿ ಅಚ್ಚಳಿಯದ ನೆನಪಾಗಿ ಇರುತ್ತದೆ ಹಾಗೆಯೇ ಈ ಮಹಾನ್ ತ್ಯಾಗವು ಭವಿಷ್ಯದ ಪೀಳಿಗೆಗೆ ಸದಾ ಪ್ರೇರಣೆಎನ್ನು ನೀಡುತ್ತದೆ ಎಂದು ಹೇಳಿದರು.
ಸಂಸದರ ಭೇಟಿ ಸಮಯದಲ್ಲಿ ಸಿಖ್ ಸಮುದಾಯದವರು ಅವರನ್ನು ಆತ್ಮೀಯವಾಗಿ ಸ್ವಾಗತಿಸಿದರು ಮತ್ತು ಸಮುದಾಯದ ಪರಂಪರೆಯನ್ನು ಗೌರವಿಸಲು ಅವರ ನೆರವಿಗೆ ಕೃತಜ್ಞತೆಯನ್ನು ಸಲ್ಲಿಸಿದರು.