6ನೇ ಬೊಲ್ಪು ಮಹೋತ್ಸವ: ಸಂಭ್ರಮದಿಂದ ನೆರವೇರಿದ ದೀಪಾವಳಿ ಕ್ರೀಡಾಕೂಟ

  • 04 Nov 2024 10:15:25 PM

ಕಡೇಶಿವಾಲಯ - ಹಿಂದು ಜಾಗರಣ ವೇದಿಕೆ ಕಡೇಶಿವಾಲಯ ಹಾಗೂ ಶ್ರೀರಾಮ ಭಜನಾ ಮಂದಿರ ಪ್ರತಾಪನಗರ ಆಶ್ರಯದಲ್ಲಿ 6 ನೇ ವರ್ಷದ ಬೊಲ್ಪು ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.ಈ ಕಾರ್ಯಕ್ರಮವು ದೀಪಾವಳಿ, ಗೋಪೂಜೆ ಮತ್ತು ಭೂಮಿ ಸುಪೋಕ್ಷಣಾ ವಿಜೃಂಭಣೆಯೊಂದಿಗೆ ವಿಶೇಷವಾಗಿ ಆಯೋಜಿಸಲಾಗಿತ್ತು. ನೂತನವಾಗಿ ಕಾಮಗಾರಿಯಾದ ವೇದಿಕೆ ಉದ್ಘಾಟನೆಗೊಂಡಿತು.

 

ಬಾಲಕರಿಗಾಗಿ ಲಗೋರಿ, ಪುರುಷರ ಕಬ್ಬಡ್ಡಿ, ಹಗ್ಗಜಗ್ಗಾಟ, ಮತ್ತು ಮಕ್ಕಳ ಭಕ್ತಿಗೀತೆ ಸೇರಿದಂತೆ ವಿವಿಧ ಆಟಗಳು ಆಯೋಜಿಸಲ್ಪಟ್ಟವು. ಈ ಆಟೋಟ ಸ್ಪರ್ಧೆಗಳು ಯಶಸ್ವಿಯಾಗಿ ಜರಗಿತು.


ಈ ಕಾರ್ಯಕ್ರಮದಲ್ಲಿ ಸಂಘದ ಪ್ರಮುಖರು, ಊರ ಹಿರಿಯರು, ಗಣ್ಯರು ಮತ್ತು ಹಿಂದೂ ಜಾಗರಣ ವೇದಿಕೆಯ ಮುಖಂಡರು ಭಾಗವಹಿಸಿದ್ದರು, ಈ ಕಾರ್ಯಕ್ರಮಕ್ಕೆ ನೂರಾರು ಜನರ ಭಾಗವಹಿಸುವಿಕೆಯು ಸ್ಥಳೀಯ ಸಮಾಜದ ಒಗ್ಗಟ್ಟನ್ನು ಎತ್ತಿ ತೋರಿಸುತ್ತದೆ ಎಂದು ಶುಭ ಹಾರೈಸಿದರು.