ಬಂಟ್ವಾಳ: ಶ್ರೀ ಕುಪ್ಪೆಟ್ಟು ಪಂಜುರ್ಲಿ ದೈವದ ಪ್ರತಿಷ್ಠಾ ಮಹೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ

  • 30 Dec 2024 10:43:08 AM

ಬಂಟ್ವಾಳ: ಶ್ರೀ ಕುಪ್ಪೆಟ್ಟು ಪಂಜುರ್ಲಿ ದೈವದ ಮೂಲಸ್ಥಾನ ಬಂಟ್ವಾಳದ ಕರ್ಪೆ ಗ್ರಾಮದಲ್ಲಿ ಕುಪ್ಪೆಟ್ಟು ಬರ್ಕೆಯ ಪ್ರತಿಷ್ಠಾ ಮಹೋತ್ಸವದ ಆಮಂತ್ರಣ ಪತ್ರಿಕೆಯನ್ನು ಗೌರವಾಧ್ಯಕ್ಷರಾದ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು 29.12.24 ರಂದು ಸೌಹಾರ್ದ ಪೂರ್ಣವಾಗಿ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಮಹೋತ್ಸವದ ಆಯೋಜನೆ ಮತ್ತು ಕಾರ್ಯಕ್ರಮದ ವೈಭವ ಹಾಗೂ ಪರಂಪರೆಯ ಮಹತ್ವದ ಬಗ್ಗೆ ಚರ್ಚೆ ನಡೆಯಿತು.

 

ಶಾಸಕರು ತಮ್ಮ ಭಾಷಣದಲ್ಲಿ ದೇವಾಲಯದ ಪರಂಪರೆಯ ಮಹತ್ವ ಹಾಗೂ ಇಂತಹ ಮಹೋತ್ಸವಗಳು ಸಮುದಾಯದ ಒಗ್ಗಟ್ಟಿಗೆ ತರುವ ಶಕ್ತಿ ಬಗ್ಗೆ ಮಾತನಾಡಿದರು. ಪ್ರತ್ಯೇಕತೆಗಳನ್ನು ದೂರ ಮಾಡಿ ಎಲ್ಲರನ್ನೂ ಒಂದಾಗಿ ಬಾಂಧವ್ಯ ಬೆಳೆಸುವಂತ ಈ ಮಹೋತ್ಸವ ಯಶಸ್ವಿಯಾಗಲೆಂದು ಎಲ್ಲರಿಗೂ ಶುಭ ಹಾರೈಸಿದರು. ಈ ಸುಸಂದರ್ಭದಲ್ಲಿ ಹಲವಾರು ಗಣ್ಯ ವ್ಯಕ್ತಿಗಳು ಕೂಡ ಉಪಸ್ಥಿತರಿದ್ದರು.