ದೇವರಗುಡ್ಡೆ ಕ್ಷೇತ್ರದಲ್ಲಿ ಡಾ.ಕೆ.ಎನ್. ವೆಂಕಟ್ರಮಣ ಹೊಳ್ಳರಿಗೆ ಗೌರವಪೂರ್ವಕ ಅಭಿನಂದನೆ!

  • 03 Jan 2025 01:54:32 PM

ಕಾಸರಗೋಡು: ದೇವರಗುಡ್ಡೆ ಶ್ರೀಶೈಲ ಮಹಾದೇವ ದೇವಸ್ಥಾನದ ಧನುಪೂಜಾ ಮಹೋತ್ಸವದ ಅಂಗವಾಗಿ ನಡೆದ ಸರ್ವೈಶ್ವರ್ಯ ಪೂಜೆಯಂದು ಧಾರ್ಮಿಕ ಮುಂದಾಳು ಡಾ. ಕೆ.ಎನ್. ವೆಂಕಟ್ರಮಣ ಹೊಳ್ಳರಿಗೆ ಗೌರವ ಪೂರ್ವಕವಾಗಿ ಅಭಿನಂದಿಸಲಾಯಿತು. 

 

1992ರಲ್ಲಿ ಕಾಡಿನಲ್ಲಿ ಶಿವಲಿಂಗವನ್ನು ಕಂಡು ಕ್ಷೇತ್ರದ ಅಭಿವೃದ್ಧಿಗೆ ನಾಂದಿ ಹಾಕಿದ ಇವರು ಸ್ಥಳದ ನಿರ್ಮಾಣದಿಂದ ಬ್ರಹ್ಮಕಲಶದವರೆಗೆ ಅನೇಕ ಸೇವೆಗಳನ್ನು ಮಾಡಿದ್ದಾರೆ.

 

ಇತ್ತೀಚೆಗಷ್ಟೆ ತಮಿಳುನಾಡಿನ ಪ್ರಸಿದ್ಧ ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್‌ ಪದವಿ ಪಡೆದ ಹೊಳ್ಳರನ್ನು ಕ್ಷೇತ್ರದ ತಂತ್ರಿವರ್ಯ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಅಸ್ರರವರ ಸಾನ್ನಿಧ್ಯದಲ್ಲಿ ಗೌರವಿಸಲಾಯಿತು.

 

 ಈ ಸಮಾರಂಭದಲ್ಲಿ ಆಡಳಿತ ಸಮಿತಿ ಅಧ್ಯಕ್ಷ ಸುಭಾಷ್ ಪಾಟಾಳಿ, ಧನುಪೂಜಾ ಸಮಿತಿ ಅಧ್ಯಕ್ಷ ನ್ಯಾಯವಾದಿ ಸದಾನಂದ ರೈ, ಹಾಗೂ ನಿಶಾಂತ್ ಮೊದಲಾದವರು ಪಾಲ್ಗೊಂಡಿದ್ದರು.