ಕಾಸರಗೋಡು: ಕಾಸರಗೋಡು ನೆಲ್ಲಿಕುಂಜೆಯ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಷಷ್ಠಿಉತ್ಸವದ ದಿನದಂದು ವಿಶೇಷ ಗೌರವಾರ್ಪಣೆ ಕಾರ್ಯಕ್ರಮವು ನಡೆಯಿತು.
ಈ ಸಂದರ್ಭದಲ್ಲಿ ದೇವಾಲಯದ ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶೋತ್ಸವ ಸಮಿತಿಯ ಕಾರ್ಯಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ಹಾಗೂ ಇತ್ತೀಚೆಗೆ ಚೆನ್ನೈನಲ್ಲಿ ಸಮಾಜಸೇವೆಗೆ ಗೌರವ ಡಾಕ್ಟರೇಟ್ ಪಡೆದ ಡಾ. ಕೆ.ಎನ್. ವೆಂಕಟ್ರಮಣ ಹೊಳ್ಳ ಅವರಿಗೆ ಕ್ಷೇತ್ರ ಸಮಿತಿಯು ವಿಶೇಷ ಸನ್ಮಾನ ಸಲ್ಲಿಸಿತು.
ಡಾ. ಹೊಳ್ಳರಿಗೆ ಸಮಿತಿಯ ಪ್ರಧಾನ ಕಾರ್ಯದರ್ಶಿ ಮಹೇಶ್ ನೆಲ್ಲಿಕುಂಜೆ, ಕಾರ್ಯದರ್ಶಿ ಅರವಿಂದ, ಉಪಾಧ್ಯಕ್ಷ ಬಾಲಕೃಷ್ಣ, ಕೋಶಾಧಿಕಾರಿ ಉಮೇಶ್, ಸದಸ್ಯರಾದ ರಮೇಶ್ ಬಾಬು, ಅಶೋಕ ಪಾಡಿ, ಬೃಜೇಶ್, ಮಂಜುನಾಥ, ಸುನಿಲ್, ಪವಿತ್ರ, ಮನು, ಮತ್ತು ರೋಶನ್ ಮೊದಲಾದವರು ಪೇಟ, ಶಾಲು ಹೊದಿಸಿ, ಹಾರ, ಫಲಪುಷ್ಪ, ಸ್ಮರಣಿಕೆ, ಮತ್ತು ಪ್ರಶಸ್ತಿ ಪತ್ರ ನೀಡಿ ಗೌರವಿಸಿದರು.