ಹಿಂದೂ ಮಹಾ ಸಭಾ ಬೆಂಗಳೂರುನಗರ ಜಿಲ್ಲಾಧ್ಯಕ್ಷರಾಗಿ ವಿ ಶ್ರೀನಿವಾಸ್ ಆಯ್ಕೆ

  • 08 Jan 2025 03:14:33 PM

ಬೆಂಗಳೂರು: ಹಿಂದೂ ಮಹಾಸಭಾ -ಕರ್ನಾಟಕ ಇದರ ಬೆಂಗಳೂರ್ ಜಿಲ್ಲಾ ಘಟಕದ ಸಭೆಯು 5/1/2025 ರಂದು ಬೆಂಗಳೂರಿನ ರಾಜಾಜಿನಗರದಲ್ಲಿ ನಡೆಯಿತು.

 

 ಈ ಸಭೆಯಲ್ಲಿ ಹಿಂದೂ ಮಹಾ ಸಭಾ ಬೆಂಗಳೂರು ಜಿಲ್ಲಾಧ್ಯಕ್ಷರಾಗಿ ವಿ ಶ್ರೀನಿವಾಸ್ ರಾಜಾಜಿನಗರ ಇವರನ್ನು ಆಯ್ಕೆ ಮಾಡಲಾಯಿತು. ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾಗಿ ಸುರೇಶ್ ಜಿ & ಇ ರಾಜು ನಾಯ್ಡು ಜಿಲ್ಲಾ ಉಪಾಧ್ಯಕ್ಷರಾಗಿ ನ್ಯಾಯವಾದಿ ಆರ್.ವಿನಯ್ ಕುಮಾರ್, ಜಿಲ್ಲಾ ಖಜಾಂಚಿ ಏನ್.ರವಿಕುಮಾರ್, ಹಿಂದೂ ಮಹಿಳಾ ಸಭಾ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಶ್ರೀಮತಿ ರಾಜೇಶ್ವರಿ ಇವರುಗಳನ್ನು ಆಯ್ಕೆ ಮಾಡಲಾಯಿತು. 

 

 ಈ ಆಯ್ಕೆಯನ್ನು ರಾಜ್ಯಾಧ್ಯಕ್ಷ ಡಾ. ಎಲ್ ಕೆ ಸುವರ್ಣ ರವರು ಸಭೆಯಲ್ಲಿ ಘೋಷಿಸಿದರು. ಈ ಸಂದರ್ಭದಲ್ಲಿ ಹಿಂದೂ ಮಹಾಸಭಾ ರಾಜ್ಯ ಉಪಾಧ್ಯಕ್ಷರಾದ ಬಸವರಾಜ್ ಹಡಪದ್ ಮುಂಡಗೋಡು, ಯುವ ಘಟಕ ಅಧ್ಯಕ್ಷ ಹರೀಶ್ ಶೆಟ್ಟಿ ಬೆಂಗಳೂರು, ರಾಜ್ಯ ಪ್ರಧಾನ ಕಾರ್ಯದರ್ಶಿ ಸಂತೋಷ ಅರ್ಜುನ್, ರಾಜ್ಯ ಸಂಘಟನಾ ಕಾರ್ಯದರ್ಶಿ ವೀರೇಶ್ ಹ ಡಪದ್, ಮಹಿಳಾ ಸಭಾ ರಾಜ್ಯಾಧ್ಯಕ್ಷೇ ಕೆ. ಟಿ ಗುಲಾಬಿ ಆರ್. ಆರ್ ನಗರ , ಕಾರ್ಯಾಧ್ಯಕ್ಷೆ ಶ್ರೀಮತಿ ಪವಿತ್ರ ರಾಮ್ ಮೂರ್ತಿ ಕನಕಪುರ, ಉ. ಕ ಜಿಲ್ಲಾ ಯುವ ಘಟಕ ಅಧ್ಯಕ್ಷ ಹನುಮಂತ ಬೋವಿ,ಉ. ಕ ಜಿಲ್ಲಾ ಮಹಿಳಾ ಸಭಾ ಕಾರ್ಯದರ್ಶಿ ಸವಿತಾ ಭೋವಿ ಮುಂತಾದವರು ಉಪಸ್ಥಿತರಿದ್ದರು.