ಮಂಗಳೂರು: ಸೇವೆಯ ಪರಮ ಗುರಿಯನ್ನು ಧ್ಯೇಯವಾಗಿರಿಸಿಕೊಂಡು ಕಾರ್ಯ ನಿರ್ವಹಿಸುತ್ತಿರುವ ಬಜರಂಗದಳ ಸೇವಾ ಬ್ರಿಗೇಡ್ ಎಡಪದವು, ತನ್ನ 75ನೇ ಮಾಸಿಕ ಯೋಜನೆಯ ಸಲುವಾಗಿ ಬೃಹತ್ ರಕ್ತದಾನ ಶಿಬಿರ ಮತ್ತು ಅಮೃತ ಸೇವಾ ಮಹೋತ್ಸವವನ್ನು ಆಯೋಜಿಸಿದೆ. ಸೇವಾ ಸಂಸ್ಥೆಯು ಪ್ರಚಾರದ ಹಂಗಿಲ್ಲದೆ ಹಲವು ಕುಟುಂಬಗಳಿಗೆ ನಿರಂತರವಾಗಿ ನೆರವಾಗುತ್ತಾ ಸಮಾಜ ಸೇವೆಗೆ ಮಾದರಿಯಾಗಿದೆ.
ಈ ಮಹತ್ವದ ಕಾರ್ಯಕ್ರಮವು ವಿಶ್ವ ಹಿಂದೂ ಪರಿಷತ್, ಬಜರಂಗದಳ ಮಾತೃಶಕ್ತಿ, ದುರ್ಗಾವಾಹಿನಿ, ಮತ್ತು ಜೈ ಶ್ರೀ ರಾಮ್ ಶಾಖೆ ಎಡಪದವುಗಳ ಆಶ್ರಯದಲ್ಲಿ ಎ.ಜೆ. ಹಾಸ್ಪಿಟಲ್ ಮಂಗಳೂರು ಸಹಯೋಗದೊಂದಿಗೆ 12 ಅಸಕ್ತ ಕುಟುಂಬಗಳಿಗೆ ಸಹಾಯಧನ ವಿತರಣೆಯು ದಿನಾಂಕ: 19-01-2025, ಶ್ರೀರಾಮ ಮಂದಿರದ ಪಟ್ಟಾಭಿರಾಮ ಸಭಾಭವನ, ಎಡಪದವುಯಲ್ಲಿ ಈ ಕಾರ್ಯಕ್ರಮ ನಡೆಯಲಿದೆ.
ಸೇವಾ ಪಯಣದ 44 ಮಾಸಿಕ ಯೋಜನೆಗಳ ಮೂಲಕ 165 ಕುಟುಂಬಗಳಿಗೆ ₹52 ಲಕ್ಷಕ್ಕೂ ಹೆಚ್ಚು ಸಹಾಯಧನ ವಿತರಿಸಿರುವ ಸಂಸ್ಥೆ, ಕಳೆದ ಏಳು ವರ್ಷಗಳಿಂದ ನಿರಂತರ ಸಮಾಜಸೇವೆಯಲ್ಲಿ ತೊಡಗಿಸಿಕೊಂಡು ಮಾದರಿಯಾಗಿದೆ. ಬೃಹತ್ ರಕ್ತದಾನ ಶಿಬಿರದೊಂದಿಗೆ ಸೇವಾ ಮಹೋತ್ಸವದಲ್ಲಿ ತಾವೆಲ್ಲರೂ ಭಾಗವಹಿಸಿ, ಸೇವಾ ಚಟುವಟಿಕೆಗೆ ಶಕ್ತಿಸೇವೆ ನೀಡಬೇಕೆಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.