ಸುದೆಂಬಳ: ಸುದೆಂಬಳದಲ್ಲಿ ಶ್ರೀ ಮಲರಾಯ ದೈವದ ಪುನರ್-ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಮತ್ತು ನೇಮೋತ್ಸವ ಜನವರಿ 23ರಿಂದ 25ರ ವರೆಗೆ ವಿಜೃಂಭಣೆಯಿಂದ ನಡೆಯಲಿದೆ. ಬಾಯಾರು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಿಂದ ಹೊರ ಕಾಣಿಕೆ ಮೆರವಣಿಗೆಯ ಮೂಲಕ ಕಾರ್ಯಕ್ರಮಕ್ಕೆ ಧಾರ್ಮಿಕ ಶುಭಾರಂಭವಾಗಲಿದೆ.
ಜನವರಿ 24ರಂದು ಪುನರ್-ಪ್ರತಿಷ್ಠಾ ಬ್ರಹ್ಮಕಲಶೋತ್ಸವವು ಪರಿವಾರ ದೈವ ಮತ್ತು ಮಲರಾಯ ದೈವದ ಅಯುಧಗಳ ಪುನಃ ಪ್ರತಿಷ್ಠಾಪನೆಯ ಮೂಲಕ ನಡೆಯಲಿದೆ.
ಈ ಸಂದರ್ಭದಲ್ಲಿ ಗಣಹೋಮ, ಭಜನಾ ಕಾರ್ಯಕ್ರಮಗಳು, ಮತ್ತು ಅನ್ನಸಂತರ್ಪಣೆಯನ್ನು ಆಯೋಜಿಸಲಾಗಿದೆ. ರಾತ್ರಿ ಮಲರಾಯ ದೈವದ ಭಂಡಾರ ಸ್ವೀಕಾರ ಕಾರ್ಯಕ್ರಮವು ವಿಶೇಷವಾಗಿ ನಡೆಯಲಿದೆ.
ಅಂತಿಮ ದಿನವಾದ ಜನವರಿ 25 ರಂದು ದೈವದ ಭಂಡಾರ ಇಳಿಯುವ ಮೂಲಕ ನೇಮೋತ್ಸವ ಸಮಾರೋಪಗೊಳ್ಳಲಿದೆ. ಈ ಸಂಭ್ರಮದಲ್ಲಿ ಭಾಗವಹಿಸಿ ದೈವದ ಕೃಪೆಯನ್ನು ಪಡೆಯುವಂತೆ ಭಕ್ತರನ್ನು ಆಯೋಜಕರು ವಿನಮ್ರವಾಗಿ ಆಹ್ವಾನಿಸಿದ್ದಾರೆ.