ಚಾಮರಾಜ ನಗರ, ಜನವರಿ 21: ಗೋ ಸಂರಕ್ಷಣಾ ಸಮಿತಿ ಇದರ ವತಿಯಿಂದ ಚಾಮರಾಜೇಶ್ವರ ದೇವಾಲಯದಿಂದ ಪ್ರತಿಭಟನಾ ಮೆರವಣಿಗೆ ಆಯೋಜಿಸಲಾಗಿದ್ದು, ಗೋ ಹಂತಕರನ್ನು ಬಂಧಿಸಲು ಒತ್ತಾಯಿಸಲಾಯಿತು.
ಭಾರತದ ಕಿಸಾನ್ ಸಂಘದ ಚಾಮರಾಜನಗರ ಜಿಲ್ಲಾಧ್ಯಕ್ಷ ಕೊಡಸೋಗೆ ಶಿವಪ್ರಕಾಶ್ ಅವರು ತಮ್ಮ ಪ್ರಸ್ತಾವಿಕ ಭಾಷಣದಲ್ಲಿ, ರೈತ ದೇಶದ ಬೆನ್ನೆಲುಬಾದರೆ, ಗೋವು ರೈತನ ಬದುಕಿನ ಅಡಿಪಾಯವಾಗಿದೆ. ಇಂತಹ ಪವಿತ್ರ ಪ್ರಾಣಿಗಳ ಹಿಂಸೆಯನ್ನು ತಡೆಗಟ್ಟುವುದು ನಮ್ಮೆಲ್ಲರ ಜವಾಬ್ದಾರಿಯಾಗಿರುತ್ತದೆ ಎಂದು ಹೇಳಿದರು.
ರಾಜ್ಯದ್ಯಂತ ಇಂತಹ ದುಷ್ಪ ಕೃತ್ಯಗಳಿಗೆ ರಾಜ್ಯ ಸರ್ಕಾರ ಕಡಿವಾಣ ಹಾಕಬೇಕು ಎಂದು ಅಗ್ರಹಪೂರ್ವಕವಾಗಿ ಒತ್ತಾಯಿಸಿದರು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಹಂತ ಹಂತವಾಗಿ ಪ್ರತಿಭಟನೆ ಮಾಡಲಾಗುವುದು ಎಂದು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಈ ಪ್ರತಿಭಟನೆಯಲ್ಲಿ ಹಿಂದು ಜಾಗರಣ ವೇದಿಕೆಯ ಜಿಲ್ಲಾ ಕಾರ್ಯಕಾರಿಣಿ ಸದಸ್ಯರಾದ ಸುಂದರ ರಾಜ್, ಚಂದ್ರಶೇಖರ ರಾವ್, ನಾರಾಯಣಸ್ವಾಮಿ, ಚಂದಕವಾಡಿ ಯೋಗೀಶ್, ಮುಖಂಡರುಗಳಾದ ಪಿ ಬಿ ಶಾಂತಮೂರ್ತಿ ಕುಲಗಾಣ, ಮಹಾದೇವಸ್ವಾಮಿ ಬೆರಂಬಾಡಿ.ಆರ್ ಸುಂದರ್, ಬಾಲಸುಬ್ರಮಣ್ಯ, ಮಮತ, ಸರೋಜಮ್ಮ, ವನಜಾಕ್ಷಿ ಮೂಡ್ತಾ ಕೂಡು ಪ್ರಕಾಶ್, ಹೊನ್ನೂರು ಮಹದೇವಸ್ವಾಮಿ, ಜಯಸುಂದರ್, ನಟರಾಜು, ಕಾಡಳ್ಳಿ ಕುಮಾರ್,ರಂಗಸ್ವಾಮಿ ಸುದರ್ಶನ್ ಗೌಡ,ಮಂಜುನಾಥ್, ರಾಘವೇಂದ್ರ, ಚಂದ್ರಶೇಖರ್, ಮನೋಜ್ ಪಟೇಲ್, ಎಂ ఎనో ಚಂದ್ರಶೇಖರ್,ಪ್ರದೀಪ್ ದೀಕ್ಷಿತ್, ವೀರೇಂದ್ರ, ಮಂಜುನಾಥ್,ಪ್ರಭುರಾಮ್, ಮಧು ಮದ್ದೂರು, ವೆಂಕಟೇಶ್, ಶಂಕರ, ಬುಲೆಟ್ ಚಂದ್ರು, ನಾಗೇಂದ್ರಬಾಬು, ಅನಂದ್ ಭಗೀರಥ, ಬಾಲರಾಜು,ಮಹೇಶ್ ಮರಿಯಾಲ, ನೂರೊಂದುಶೆಟ್ಟಿ,ರಮೇಶ್ ಅಟೋ ರಮೇಶ್, ದಯಾನಿಧಿ ಚಂದ್ರು, ಸುದರ್ಶನ್ ಆಳ್ವಾ, ಪ್ರಕಾಶ್, ನಂದೀಶ್, ಪೃಥ್ವಿ, ಕಿರಣ್, ಪ್ರವೀಣ್, ಮಂಜು, ಮುಂತಾದವರು ಉಪಸ್ಥಿತರಿದ್ದರು.