ಅಜಿಲಮೊಗರು: ವಿಶ್ವ ಹಿಂದೂ ಪರಿಷದ್ ಬಜರಂಗದಳ, ಜೈ ಹನುಮಾನ್ ಶಾಖೆ (ರುದ್ರಗಿರಿ, ಅಜಿಲಮೊಗರು) ಆಶ್ರಯದಲ್ಲಿ, ಇಂದು (25-01-2025) ಶನಿವಾರ ಅಜಿಲಮೊಗರು ಜೈ ಹನುಮಾನ್ ಕಟ್ಟೆ ಬಳಿಯ ವಿದ್ಯುದ್ದೀಪಾಲಂಕೃತ ರಂಗಮಂಟಪದಲ್ಲಿ 10ನೇ ವರ್ಷದ ಯಕ್ಷಗಾನ ಸೇವೆಯಾಟ ಜರಗಲಿದೆ. ಈ ಕಾರ್ಯಕ್ರಮದಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯು "ದಶಾವತಾರ" ಎಂಬ ಪುಣ್ಯ ಕಥಾ ಭಾಗವನ್ನು ಆಡಿತೋರಿಸಲಿದ್ದಾರೆ.
ಈ ವಿಶೇಷ ಕಾರ್ಯಕ್ರಮದ ಪ್ರಯುಕ್ತ, ಮಧ್ಯಾಹ್ನ 3:45 ಕ್ಕೆ ಬ್ರಹ್ಮಶ್ರೀ ನಾರಾಯಣಗುರು ಮಂದಿರ ನೇಲ್ಯಪಲ್ಕೆಯಿಂದ ದೇವರ ಭವ್ಯ ಶೋಭಾಯಾತ್ರೆ ಮತ್ತು ಸಂಜೆ 5:45ಕ್ಕೆ ಚೌಕಿ ಪೂಜೆ ಹಾಗೂ ರಾತ್ರಿ 8:00ಕ್ಕೆ ಅನ್ನಸಂತರ್ಪಣೆ ಕಾರ್ಯಕ್ರಮಗಳು ನಡೆಯಲಿವೆ. ಭಗವದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಸೇವೆಯಾಟವನ್ನು ಯಶಸ್ವಿಗೊಳಿಸಲು ತಮ್ಮ ತನು-ಮನ-ಧನ ಸಹಕಾರ ನೀಡಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿಸಿದ್ದಾರೆ.