ಶಿವಪಾಡಿ: ಶ್ರೀ ಉಮಾಮಹೇಶ್ವರಿ ದೇವಸ್ಥಾನ ಅಭಿವೃದ್ಧಿ ಟ್ರಸ್ಟ್ (ರಿ.) ಆಶ್ರಯದಲ್ಲಿ ಆಯೋಜನೆಯಾಗಿರುವ ಶಿವಪಾಡಿ ವೈಭವವು 2025 ರ ಫೆಬ್ರವರಿ 22ರಿಂದ 26ರ ತನಕ ನಡೆಯಲಿದೆ. ಈ ವೈಭವದಲ್ಲಿ ಕೃಷಿಮೇಳ, ಯಕ್ಷಮೇಳ, ಆಹಾರಮೇಳ, ಮನೋರಂಜನಮೇಳ ಹಾಗೂ ಆರೋಗ್ಯ ಮೇಳದಂತಹ ನಾನಾ ಕಾರ್ಯಕ್ರಮಗಳು. ಈ ಶ್ರೀ ಉಮಾಮಹೇಶ್ವರಿ ದೇವಸ್ಥಾನದ ವಠಾರದಲ್ಲಿ ಆಯೋಜಿಸಲಾಗಿದೆ.
ಈ ಉತ್ಸವದ ಪೂರ್ವಭಾವಿ ಸಭೆ ಹಾಗೂ ಕಾರ್ಯಾಲಯ ಉದ್ಘಾಟನೆಯು ಇಂದು ವಿಜೃಂಭಣೆಯಿಂದ ನಡೆಯಿತು. ಈ ಸಂದರ್ಭದಲ್ಲಿ ಉಡುಪಿಯ ನಿಕಟ ಪೂರ್ವ ಶಾಸಕರಾದ ಕೆ. ರಘುಪತಿ ಭಟ್ ಅವರು ಸಭೆಯಲ್ಲಿ ಭಾಗವಹಿಸಿ ವೈಭವದ ಮಹತ್ವವನ್ನು ವಿವರಿಸಿದರು. ಈ ಮಹಾ ಉತ್ಸವದಲ್ಲಿ ಎಲ್ಲರು ಭಾಗವಹಿಸಿ ಸರ್ವರಲ್ಲೂ ಪಾಲ್ಗೊಳ್ಳುವಂತೆ ಶುಭ ಹಾರೈಸಿದರು.